ನೀಲಾನಹಳ್ಳಿಯಲ್ಲಿ ಆಂಜನೇಯಸ್ವಾಮಿ ತೇರು, ಕಾರಣಿಕ

ನೀಲಾನಹಳ್ಳಿಯಲ್ಲಿ ಆಂಜನೇಯಸ್ವಾಮಿ ತೇರು, ಕಾರಣಿಕ

ದಾವಣಗೆರೆ, ಮಾ. 2 – ಇಲ್ಲಿಗೆ ಸಮೀಪದ ನೀಲಾನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇದೇ ದಿನಾಂಕ 5 ರ ಬುಧವಾರ ಬೆಳಗ್ಗೆ  ಶ್ರೀ ಸ್ವಾಮಿ ರಥೋತ್ಸವ ಹಾಗೂ ಸಂಜೆ ಕಾರಣಿಕ ನಡೆಯಲಿದೆ ಎಂದು ದೇವಸ್ಥಾನದ ಕನ್ವೀನರ್ ಎನ್.ಎಂ. ಆಂಜನೇಯ ಗುರೂಜಿ ತಿಳಿಸಿದ್ದಾರೆ.

ನುಡಿದಂತೆ ನಡೆಯುವ ಸಾವಿರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ಹಾಗೂ ಕಾರಣಿಕವು ಬಹಳ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ. ಈ ಹಿಂದೆ ದೇವರ ಅಪ್ಪಣೆಯಾಗಿರುವಂತೆ  `ಹೂವಿನ ತೇರು ಎಳೆಯಬೇಕು, ನೀಲಾವತಿ ಪಟ್ಟಣವಾಗಬೇಕು’ ಎಂಬುದು ಸತ್ಯವಾಗಿದೆ.

ನಾಳೆ ದಿನಾಂಕ 3 ಸೋಮ ವಾರ ರಾತ್ರಿ 9.10ಕ್ಕೆ ಕಂಕಣಧಾರಣೆ ನಡೆಯುವುದು. ನಾಡಿದ್ದು ಮಂಗಳವಾರ ಸಂಜೆ ದೊಡ್ಡಬಾತಿ ಯ ಶ್ರೀ ಬೀರಲಿಂಗೇಶ್ವರ ದೇವರು ಆಗಮಿಸುವುದು. ಅಂದು ರಾತ್ರಿ ಅರಿಶಿಣ, ಎಣ್ಣೆ ಕಾರ್ಯ ನಡೆಯುವುದು.  ಆನೆಕೊಂಡ ಶ್ರೀ ಬಸವೇಶ್ವರ ದೇವರನ್ನು ಆಹ್ವಾನಿಸಲಾಗುವುದು.

 ಹಾಗೂ ರಾತ್ರಿ 11.30ಕ್ಕೆ ಉಚ್ಚಾಯ ಕಾರ್ಯಕ್ರಮ ನಡೆಯುವುದು. ದಿನಾಂಕ 5ರ ಬುಧವಾರ ಬೆಳಿಗ್ಗೆ 10.10ಕ್ಕೆ ನೂತನ ತೇರಿನ ರಥೋತ್ಸವ ನಡೆಯಲಿದೆ. 

ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ಭಕ್ತಾದಿಗಳು ಹರಕೆ ತೀರಿಸುವುದು. ಸಂಜೆ 4.30ಕ್ಕೆ ಬೇಟೆ ಆಡುವುದು. ನಂತರ 5.30ಕ್ಕೆ ಮುಳ್ಳುಗದ್ದಿಗೆ ಏರುವುದು. ಸಂಜೆ 6.30ಕ್ಕೆ ಕಾರಣಿಕ ನುಡಿಯುವುದು. ರಾತ್ರಿ 7.30ಕ್ಕೆ ಭೂತ ಸೇವೆ, ನಂತರ 8.30ಕ್ಕೆ ಓಕಳಿ ಕಾರ್ಯ ಹಾಗೂ 9.30ಕ್ಕೆ ಗಂಗೆ ಪೂಜೆ ನೆರವೇರುವುದು.

error: Content is protected !!