ಮಲೇಬೆನ್ನೂರು ಸಮೀಪದ ನಂದಿತಾವರೆ ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವರ ರಥೋತ್ಸವವು ನಾಳೆ ಭಾನುವಾರ ಜರುಗಲಿದೆ.
ಇಂದು ಬೆಳಿಗ್ಗೆ 5 ರಿಂದ 7ರವರೆಗೆ ದೇವರಿಗೆ ರುದ್ರಾಭೀಷೆಕ, ಪೂಜೆ ಬಳಿಕ ಬೆಳಿಗ್ಗೆ 8.30ಕ್ಕೆ ಕುದುರೆ ಉಚ್ಛಾಯ ನಡೆಯಲಿದೆ. ರಾತ್ರಿ 9.30ಕ್ಕೆ ಮುತ್ತೈದೆಯರಿಂದ ಎಣ್ಣೆ, ಅರಿಶಿಣ ಹಾಗೂ ಮಹಾಮಂಗಳಾರತಿಯೊಂದಿಗೆ ಮಹಾರಥಕ್ಕೆ ಕಳಾಸಧಾರಣೆ ಮಾಡಲಾಗುವುದು.
ನಾಳೆ ಭಾನುವಾರ ಬೆಳಿಗ್ಗೆ 5 ರಿಂದ 7ರವರೆಗೆ ವಾಸನದ ಜಿ. ನಂದಿಗೌಡರ ಕುಟುಂಬದಿಂದ ದೇವರಿಗೆ ರುದ್ರಾಭಿಷೇಕ, ಬೆಳಿಗ್ಗೆ 9.30ರಿಂದ ಸುರಿಗಿ ನೀರು ನಂತರ ಜಿಗಳಿಯ ಗೌಡ್ರ ವಂಶಸ್ಥರಿಂದ ದೇವರಿಗೆ ಬಾಸಿಂಗ ಧಾರಣೆ ಮಾಡಲಾಗುವುದು. ಬೆಳಿಗ್ಗೆ 10.30ರಿಂದ ಕಿವಿ ಚುಚ್ಚುವುದು. ಶಾಸ್ತ್ರ, ಹರಕೆ ಒಪ್ಪಿಸುವ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 10.30ಕ್ಕೆ ಎಕ್ಕೆಗೊಂದಿ ಗ್ರಾಮದ ಬಸವೇಶ್ವರ ದೇವರನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ಇದೇ ದಿನ ತಡರಾತ್ರಿ 12.30ಕ್ಕೆ ಶ್ರೀ ಬಸವೇಶ್ವರ ದೇವರ ಮಹಾರಥೋತ್ಸವವು ಸಕಲ ವಾದ್ಯಗಳೊಂದಿಗೆ ಜರುಗಲಿದೆ.