ಹರಿಹರದಲ್ಲಿ ಶ್ರದ್ಧಾ-ಭಕ್ತಿಯ ಮಹಾಶಿವರಾತ್ರಿ ಆಚರಣೆ

ಹರಿಹರದಲ್ಲಿ ಶ್ರದ್ಧಾ-ಭಕ್ತಿಯ ಮಹಾಶಿವರಾತ್ರಿ ಆಚರಣೆ

ಹರಿಹರ, ಫೆ.26- ನಗರದ ಶ್ರೀ ಹರಿಹರೇಶ್ವರ ಸ್ವಾಮಿ, ನೂರ ಎಂಟು ಲಿಂಗೇಶ್ವರ ಸ್ವಾಮಿ, ಹರ ಮಠದ ಶಿವಲಿಂಗೇಶ್ವರ ಸ್ವಾಮಿ, ನೂರಾ ಎಂಟು ಲಿಂಗೇಶ್ವರ ಸ್ವಾಮಿ ದೇವಸ್ಥಾನ ಹಿಂಬದಿಯ ಕುಂಬಾಳೇಶ್ವರ ಸ್ವಾಮಿ, ಜೋಡು ಬಸವೇಶ್ವರ ಸ್ವಾಮಿ, ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ಸಹಸ್ರಾರ್ಜುನ ವೃತ್ತದ ಹತ್ತಿರದಲ್ಲಿರುವ ಅಮೃತೇಶ್ವರ ಸ್ವಾಮಿ, ಬಸವೇಶ್ವರ ಸ್ವಾಮಿ, ಮೂಕ ಬಸವೇಶ್ವರ ಸ್ವಾಮಿ, ಪೇಟೆ ಆಂಜನೇಯ ಸ್ವಾಮಿ, ಸಂಗಮೇಶ್ವರ ಸ್ವಾಮಿ, ರಾಘವೇಂದ್ರ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ, ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ, ವಿಶೇಷ ರುದ್ರಾಭಿಷೇಕ, ಅಲಂಕಾರ, ಮಹಾಮಂಗಳಾರತಿ ಮುಂತಾದ ಪೂಜಾ ಕಾರ್ಯಗಳು ಶ್ರದ್ಧಾ – ಭಕ್ತಿಯಿಂದ ನಡೆದವು. 

ಇತಿಹಾಸ ಪ್ರಸಿದ್ಧ ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನದಲ್ಲಿ  ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಬಿಸಿಲಿನ ತಾಪವನ್ನು ಲೆಕ್ಕಿಸದೆ ಮತ್ತು ಸಂಜೆಯಿಂದ ತಡ ರಾತ್ರಿಯವರೆಗೆ ಸ್ವಾಮಿ ದರ್ಶನ ಮಾಡಿ ತೆಂಗಿನ ಕಾಯಿ, ಬಾಳೆಹಣ್ಣು, ಬಿಲ್ವಪತ್ರೆ, ತುಳಸಿ ಪತ್ರೆ, ವಿವಿಧ ಬಗೆಯ ಪುಷ್ಪಗಳು, ದ್ವೀಪಗಳ ಬತ್ತಿ ಸಮರ್ಪಿಸಿ ಶಿವನನ್ನು ಆರಾಧಿಸಿದರು.

ನಾರಾಯಣ ಜೋಯಿಸರು, ಹರಿಶಂಕರ್ ಜೋಯಿ ಸರು, ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಮೂರ್ತಿ, ಗುರುಪ್ರಸಾದ್, ಚಿದಂಬರ ಜೋಯಿಸರು, ಲಕ್ಷ್ಮೀಕಾಂತ ಜೋಯಿಸರು, ರಾಘವ ಗುರುಪ್ರಸಾದ್, ಇತರರು ಪೂಜಾ ಕಾರ್ಯದಲ್ಲಿ ನಿರತರಾಗಿದ್ದರು. 

ನಗರದಲ್ಲಿನ ಭಕ್ತರು ಮನೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಅಭಿಷೇಕ ಪುಷ್ಪಾರ್ಚನೆ, ಬಿಲ್ವಾರ್ಚನೆ ಸೇರಿದಂತೆ  ವಿವಿಧ ಬಗೆಯ ಹಣ್ಣುಗಳ ನೈವೇದ್ಯದ ಜೊತೆಗೆ ದೇವರ ಆರಾಧನೆಯೊಂದಿಗೆ ಜಾಗರಣೆ ಮಾಡಿದರು. 

ಹೊಸಭರಂಪುರ ಬಡಾವಣೆಯ ಶ್ರೀ ನೂರಾ ಎಂಟು ಲಿಂಗೇಶ್ವರ ದೇವಸ್ಥಾನದಲ್ಲಿ ಸೊಲ್ಲಾಪುರದ ಶ್ರೀ ಶರಣ ಬಸವಲಿಂಗ ಸ್ವಾಮಿಗಳ ನೇತೃತ್ವದಲ್ಲಿ ನೂರ ಎಂಟು ಲಿಂಗೇಶ್ವರ ಸ್ವಾಮಿಗೆ ಅಭಿಷೇಕ, ಅಲಂಕಾರ ಮಹಾಮಂಗಳಾರತಿ ಮುಂತಾದ ಪೂಜೆಗಳನ್ನು ಸಮರ್ಪಿಸಿದರು.

ಹಲವಾರು ದೇವಸ್ಥಾನಗಳಲ್ಲಿ ನಡೆದ ರುದ್ರಾಭಿಷೇಕಕ್ಕೆ ಮಹಾ ತಪಸ್ವಿ ಸೇವಾ ಫೌಂಡೇಷನ್ ವತಿಯಿಂದ ದೇವಸ್ಥಾನಗಳಿಗೆ ಗಂಗಾಜಲವನ್ನು ಸಮರ್ಪಿಸಿ, ಭಕ್ತಿ ಅರ್ಪಿಸಿದರು. ವಿವಿಧ ಸಂಘ, ಸಂಸ್ಥೆಯವರು ಭಕ್ತರಿಗೆ ಕುಡಿಯುವ ನೀರು, ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ ಗುತ್ತೂರು,  ಜಿ.ಪಂ. ಮಾಜಿ ಅಧ್ಯಕ್ಷ ಎಸ್‌.ಎಂ. ವೀರೇಶ್ ಹನಗವಾಡಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ನಗರಸಭೆ ಸದಸ್ಯರಾದ ಕೆ.ಜಿ. ಸಿದ್ದೇಶ್, ಶಂಕರ್ ಖಟಾವ್ಕರ್, ಎ. ವಾಮನಮೂರ್ತಿ, ದಿನೇಶ್ ಬಾಬು, ಉಷಾ ಮಂಜುನಾಥ್, ಲಕ್ಷ್ಮಿ ಮೋಹನ್ ದುರುಗೋಜಿ, ನಾಮನಿರ್ದೇಶನ ಸದಸ್ಯ ಕೆ.ಬಿ. ರಾಜಶೇಖರ್, ಗಜಾನನ ಯುವಕ ಸಂಘದ ಮುಖ್ಯಸ್ಥ ದಿನೇಶ್ ಕೊಣ್ಣೂರ, ವೆಂಕಟೇಶ್ವರ ದೇವಸ್ಥಾದ ವೈ.ಲಕ್ಷ್ಮಣ,  ಅಮೃತೇಶ್ವರ ದೇವಸ್ಥಾನ ಸಮಿತಿಯ ಕಾಳಪ್ಪ ಬೊಂಗಾಳೆ, ರಾಘವೇಂದ್ರ, ಜ್ಞಾನೇಶ್ವರ, ಅರುಣ್ ಕುಮಾರ್, ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ. ನಾಗರಾಜ್ ಬಿರ್ಲಾ, ವಿನಾಯಕ ಆರಾಧ್ಯಮಠ, ವಿಜಯ ದಾವಣಗೆರೆ ಇತರರು ಹಾಜರಿದ್ದರು.

error: Content is protected !!