ಹರಪನಹಳ್ಳಿ, ಫೆ. 26 – ತಾಲ್ಲೂಕಿನ ನೀಲಗುಂದದ ಗುಡ್ಡದ ಸಂಸ್ಥಾನ ಜಂಗಮಪೀಠದಿಂದ ಜರುಗಿದ ಜಂಗಮ ಜಾತ್ರೆಯ ಭಕ್ತ ಹಿತಚಿಂತನಾ ಸಮಾರಂಭದಲ್ಲಿ ಧಾರ್ಮಿಕ ಸಾಮಾಜಿಕ ಸೇವೆ ಪರಿಗಣಿಸಿ ಚಿರಸ್ತಿಹಳ್ಳಿ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಅವರಿಗೆ ಶ್ರೀ ಚನ್ನಬಸವ ಶಿವಯೋಗಿ ಮಹಾಸ್ವಾಮಿಗಳು `ಧಾರ್ಮಿಕ ಶಿರೋರತ್ನ’ ಪ್ರಶಸ್ತಿ ಪ್ರದಾನ ಮಾಡಿದರು.
ಅಡವಿಮಲ್ಲನಕೇರಿ ಶ್ರೀ ಹೊಳಲು ಶ್ರೀ ಹಾಗೂ ಪಿಕಾರ್ಡ ಬ್ಯಾಂಕ್ ಅಧ್ಶಕ್ಷ ಬಿ.ರಾಜಕುಮಾರ್, ರೈತ ಮುಖಂಡ ಎಚ್.ಎಂ.ಮಹೇಶ್ವರಸ್ವಾಮಿ, ಸಾಹಿತಿ ಜಗನ್ನಾತ್, ಪಂಡಿತ್ ಮಹಾಂತೇಶ್ ಶಾಸ್ರ್ತಿಗಳು, ಚಂದ್ರಶೇಖರ, ಕಲ್ಲಳ್ಳಿ ಗೋಣೆಪ್ಪ, ಶಿಕ್ಷಕರಾದ ಮಹಾಂತೇಶ್,
ಕಿರಣ ಎಂ., ಮಂಜುನಾಥಸ್ವಾಮಿ, ಎಸ್.ಸಿದ್ಧಲಿಂಗಪ್ಪ ಇತರರು ಇದ್ದರು.