ಜಗಳೂರು, ಫೆ. 26- ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಇಲ್ಲಿನ ಎಸ್.ಎಂ.ವಿ. ವಿದ್ಯಾವರ್ಧಕ ಸಂಘ ಹಾಗೂ ಎನ್.ಎಂ.ಕೆ. ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಎನ್.ಎಂ.ಕೆ. ಶಾಲೆಯ ಕಾರ್ಯದರ್ಶಿ ಎನ್. ಎಂ. ಲೋಕೇಶ್, ಪ್ರತಿಯೊಬ್ಬರೂ ಕ್ಯಾನ್ಸರ್ ಕುರಿತು ಜಾಗೃತರಾಗಬೇಕು. ಆಗ ಮಾತ್ರ ರೋಗವನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ. ಕ್ಯಾನ್ಸರ್ ಎಂದರೆ ಒಂದೇ ರೀತಿ ಇರುವುದಿಲ್ಲ. ತಂಬಾಕು ಸೇವನೆಯಿಂದ. ಹಾಗೂ ಮದ್ಯಪಾನ ಹಾಗೂ ಕಡಿಮೆ ಪ್ರಮಾಣದ ತರಕಾರಿ, ಹಣ್ಣು ಸೇವನೆ ಮತ್ತಿತರೆ ಹಲವಾರು ಕಾರಣಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಸ್ವಚ್ಛತೆಯನ್ನು ಕಾಪಾಡಬೇಕು. ರೋಗವು ಕಂಡು ಬಂದಲ್ಲಿ ಬೇಗನೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಲೆಯ ಆಡಳಿತಾಧಿಕಾರಿ ಕೆ.ಎಂ ಅನಿತ, ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಹಾಗೂ ಶಿಕ್ಷಕ- ಶಿಕ್ಷಕಿಯರು ಭಾಗವಹಿಸಿದ್ದರು.