ನಿರಾಶ್ರಿತರ ಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ

ನಿರಾಶ್ರಿತರ ಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ

ದಾವಣಗೆರೆ, ಫೆ.24- ಮೈಕ್ರೋ ಫೈನಾನ್ಸ್, ಮತ್ತಿತರೆ ಕಡೆ ಸಾಲ ಮಾಡಿ, ಮನೆ ಬಿಟ್ಟು, ಹಿರಿಯ ನಾಗರಿಕರ ಉದ್ಯಾನವನದಲ್ಲಿ ನಾಲ್ಕೈದು ದಿನಗಳಿಂದ ಕಾಲ ಕಳೆಯುತ್ತಿದ್ದ ನಿರಾಶ್ರಿತರಿಗೆ ತಕ್ಷಣ ಪರಿಹಾರ ಒದಗಿಸುವುದರ ಮೂಲಕ ಸ್ಪಂದಿಸಿದ ಜಿಲ್ಲಾಧಿಕಾರಿಗಳ ಕ್ರಮವನ್ನು ಸರ್ವೋದಯ ಸಮುದಾಯದ ಶಿವನಕೆರೆ ಬಸವಲಿಂಗಪ್ಪ ಶ್ಲ್ಯಾಘಿಸಿದ್ದಾರೆ.

ನಗರದ ಎಂ.ಸಿ.ಸಿ. `ಬಿ’ ಬ್ಲಾಕ್ ನಲ್ಲಿರುವ ಹಿರಿಯ ನಾಗರಿಕರ ಉದ್ಯಾನವನದಲ್ಲಿ ಇಂದು ಮುಂಜಾನೆ ತಾನು ವಾಯುವಿಹಾರ  ಮಾಡುತ್ತಿದ್ದ ವೇಳೆ ಅಲ್ಲಿ ನಿರಾಶ್ರಿತರಾಗಿ ಬೀಡು ಬಿಟ್ಟಿದ್ದ ಹುಲಿಗೆಮ್ಮನ ಕುಟುಂಬದ ಐದು ಜನರನ್ನು ಕಂಡು, ಅವರನ್ನು ವಿಚಾರಿಸಿದೆ.  ಅವರು ಎಸ್.ಜೆ. ಎಂ ನಗರ ನಿವಾಸಿಗಳಾಗಿದ್ದು, ಚಿಂದಿ ಆಯುವವರು ಎಂಬುದು ತಿಳಿಯಿತು ಎಂದು ಬಸವಲಿಂಗಪ್ಪ ತಿಳಿಸಿದ್ದಾರೆ.

ಈ ಸಂಬಂಧ ತಕ್ಷಣ ತಾನು ವಾಟ್ಸಾಪ್ ಸಂದೇಶದಲ್ಲಿ ವಿಷಯ ತಿಳಿಸಿದಾಗ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಸ್ಪಂದಿಸಿದ್ದಾರೆ. ಈ ಕುಟುಂಬಕ್ಕೆ ತಮ್ಮಿಂದ ಯಾವ ಸಹಾಯ ಸಾಧ್ಯವಾಗಬಹುದು. ಅದನ್ನು ದಯವಿಟ್ಟು ಮಾಡಿ ಎಂದು ಕೇಳಿಕೊಂಡೆ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಆ ಬಡ ಕುಟುಂಬವನ್ನು ಭೇಟಿ ಮಾಡಿ ಅವರ ಕಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಕ್ರಮ ಕೈಗೊಂಡಿರುವುದಾಗಿ ತನಗೆ ತಿಳಿಸಿದರು.  ತಮ್ಮ ಅಪಾರ ಕೆಲಸಗಳ ಒತ್ತಡದಲ್ಲಿ, ದಕ್ಷ ಅಧಿಕಾರಿಯಾಗಿ, ಬಡವರ ನೋವಿಗೆ ಸ್ಪಂದಿಸುವ ಅಧಿಕಾರಿಯಾಗಿ ತಕ್ಷಣ ಸೂಕ್ತ ಕ್ರಮ ಕೈಗೊಂಡು ಪರಿಹಾರ ಸೂಚಿಸಿರುವುದು. ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣ, ಇವರ ಸಜ್ಜನಿಕೆ, ಆದರ್ಶ ಗುಣಗಳು ನಮಗೆಲ್ಲರಿಗೂ ಆದರ್ಶಪ್ರಾಯ ಎಂದು  ಬಸವಲಿಂಗಪ್ಪ ತಿಳಿಸಿದ್ದಾರೆ.

error: Content is protected !!