ಮಲೇಕುಂಬಳೂರಿನಲ್ಲಿ ರಥೋತ್ಸವ ಸಾಮೂಹಿಕ ವಿವಾಹ

ಮಲೇಕುಂಬಳೂರಿನಲ್ಲಿ  ರಥೋತ್ಸವ ಸಾಮೂಹಿಕ ವಿವಾಹ

ಹೊನ್ನಾಳಿ, ಫೆ.24- ನೂತನ ದಂಪತಿಗಳು ಸಾಮರಸ್ಯದಿಂದ ಜೀವನ ಸಾಗಿಸಬೇಕು. ಇಬ್ಬರು ಸಮಾನವಾಗಿ ಚಿಂತನೆ ನಡೆಸಿ ಮುಂದೆ ನಡೆಯ ಬೇಕು. ಸಣ್ಣ-ಪುಟ್ಟ ವಿಷಯಗಳಿಗೆ ವೈಮನಸ್ಸು ತಂದುಕೊಳ್ಳಬಾರದೆಂದು ಮಲೇಕುಂಬಳೂರು ಗ್ರಾಮದ ಮುಖಂಡ ಕೆ.ಬಿ.ರಾಜಶೇಖರ್‌ ಹೇಳಿದರು.

ತಾಲ್ಲೂಕಿನ ಮಲೇಕುಂಬಳೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ಅಂಗವಾಗಿ ದೇವಸ್ಥಾನದ ಅವರಣದಲ್ಲಿ ನಡೆದ 2 ಜೊತೆ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಪ್ರತಿ ವರ್ಷ ನಮ್ಮ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ನಡೆಯುತ್ತದೆ. 

ಗ್ರಾಮದ ಹಿರಿಯರೆಲ್ಲಾ ಸೇರಿ ಗ್ರಾಮದ ಜನರಿಗೆ ಅನುಕೂಲವಾಗಲೆಂದು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ತಿರ್ಮಾನಿಸಿದ್ದು, ಅದರಂತೆ ಪ್ರತಿ ವರ್ಷ ವಿವಾಹ ಕಾರ್ಯಕ್ರಮ ನಡೆಯುತ್ತದೆ. ಇದರಲ್ಲಿ ಗ್ರಾಮದವರು ನೂತನ ವಧು-ವರರಿಗೆ ತಾಳಿ, ಬಟ್ಟೆಯನ್ನು ದೇಣಿಗೆ ರೂಪದಲ್ಲಿ ನೀಡುತ್ತಾರೆಂದರು.

ಶ್ರೀ ಮಾರುತಿ ಯುವಕರ ಅನ್ನ ದಾಸೋಹ ಟ್ರಸ್ಟ್ ಕಮಿಟಿಯಿಂದ ಬಂದ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಕೆ.ಆರ್.ವರದರಾಜ್, ಎನ್.ಹೆಚ್.ಕೃಷ್ಣಪ್ಪ, ಬಿ.ಹೆಚ್.ವಾಗೀಶ್, ಜಿ.ಆರ್.ಪ್ರಕಾಶ್, ಎಚ್.ಬಿ.ಸೋಮಶೇಖರ್, ಸುಧಾಕರ್, ಅಣ್ಣಪ್ಪ, ಟಿ.ಎಸ್.ಕೃಷ್ಣಪ್ಪ, ಟಿ.ಲಕ್ಷ್ಮೀಪತಿ, ಗೋವಿಂದರಾಜು, ಕೆ.ಎಸ್.ರಂಗನಾಥಸ್ವಾಮಿ, ಜಿ.ಶ್ರೀನಿವಾಸ್, ತಿಪ್ಪೇಸ್ವಾಮಿ, ಷಣ್ಮುಖಪ್ಪ, ಹನುಮಂತಪ್ಪ ಇನ್ನಿತರರಿದ್ದರು.

error: Content is protected !!