ದಾವಣಗೆರೆ, ಫೆ. 24 – ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ದ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು ಎಂದು ಸಿಪಿಐ ಮುಖಂಡ ಆವರಗೆರೆ ವಾಸು ತಿಳಿಸಿದರು.
ಸಮೀಪದ ಆವರಗೆರೆಯಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಕಂಗೊಳಿಸುತ್ತಿದ್ದಾರೆ. ಇಂತಹ ಯುಗ ಪುರುಷರ ಜನ್ಮ ದಿನವನ್ನು ಯುವಕರ ದಿನವನ್ನಾಗಿ ಆಚರಿಸುತ್ತಾರೆ ಎಂದು ವಿವರಿಸಿದರು.
ಈ ವೇಳೆ ಎಸ್. ಚಂದ್ರಣ್ಣ, ಹನುಮಂತಪ್ಪ ಗೋಶಾಲೆ, ಹಾಲಮ್ಮ, ಪಾರ್ವತಮ್ಮ, ಕವಿತಾ, ಗಂಗಮ್ಮ, ಮಂಜಮ್ಮ, ಮಂಜುಳಾ, ಆಶಾ, ಸಂಗೀತಾ, ಪಲ್ಲವಿ ಭಾಗವಹಿಸಿದ್ದರು.