ಹರಿಹರ, ಫೆ.20 – ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ, ದೂಡಾ ಸದಸ್ಯ ಬಾತಿ ಚಂದ್ರಶೇಖರ್ ಅವರಿಗೆ ಅಟಲ್ ಜೀ ಶತಮಾನೋತ್ಸವ ಸಮಿತಿ ಹಾಗೂ ಜಿಲ್ಲಾ ಬಿಜೆಪಿಯ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ಅಟಲ್ ಜೀ ಜನ್ಮ ಶತಮಾನೋತ್ಸವ ವರ್ಷಾಚರಣೆಯ ರಾಜ್ಯ ಪ್ರಮುಖ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಶಾಸಕ ಬಿ.ಪಿ. ಹರೀಶ್,
ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ಮಾಜಿ ಜಿಲ್ಲಾ ಅಧ್ಯಕ್ಷ ಹನಗವಾಡಿ ವೀರೇಶ್, ಲೋಕಿಕೇರೆ ನಾಗರಾಜ್, ಶತಮಾನೋತ್ಸವ ಜಿಲ್ಲಾ ಸಮಿತಿಯ ಪ್ರಮುಖ ಐ.ಓ. ಕಲ್ಲೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳು ಕಾರ್ಯಕ್ರಮ ಕುರಿತು ಮಾತನಾಡಿದರು.
ಐರಣಿ ಅಣ್ಣೇಶ್,ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ ಹೆಚ್.ಪಿ. ವಿಶ್ವಾಸ್, ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಮುಖ ಕೊಟ್ರೇಶ ಗೌಡ, ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ್ ಎಂ.ಪಿ., ಪ್ರ.ಕಾರ್ಯದರ್ಶಿ ತುಳಜಪ್ಪ ಭೂತೆ, ಎಸ್ಸಿ ಮೋರ್ಚಾ ಅಧ್ಯಕ್ಷ, ಮಂಡಲ ಸಾಮಾಜಿಕ ಜಾಲತಾಣ ಪ್ರಮುಖ್ ಸಂತೋಷ ಗುಡಿಮನಿ, ಯುವ ಮುಖಂಡರಾದ ರಾಚಪ್ಪ, ಪ್ರಕಾಶ ಶೆಟ್ಟಿ, ಬಾತಿ ಶರತ್ ಚಂದ್ರಶೇಖರ್, ವಿನಾಯಕ ಆರಾಧ್ಯಮಠ ಸೇರಿದಂತೆ ಇತರರಿದ್ದರು.