ಮಲೇಬೆನ್ನೂರಿನಿಂದ ಕೊಟ್ಟೂರಿಗೆ ಪಾದಯಾತ್ರೆ

ಮಲೇಬೆನ್ನೂರಿನಿಂದ ಕೊಟ್ಟೂರಿಗೆ ಪಾದಯಾತ್ರೆ

ಮಲೇಬೆನ್ನೂರು, ಫೆ. 19- ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿಗಳ ರಥೋತ್ಸವಕ್ಕೆ ಮಲೇಬೆನ್ನೂರಿನ ಭಕ್ತರು ಮಂಗಳವಾರ ಸಂಜೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆ ಆರಂಭಿಸಿದರು. ಪಿಗ್ಮಿ ಏಜೆಂಟ್ ರಾಜು (ಕೆಬಿಆರ್) ಅವರ ನೇತೃತ್ವದಲ್ಲಿ ಪೇಂಟ್ ಸತೀಶ್, ಮಧು, ದೀಪು, ಗುಳದಹಳ್ಳಿ ಕೊಟ್ರೇಶ್, ಮಂಜು, ನಿಖಿಲ್, ಶಾಂತಮ್ಮ, ಮಾಲಾ, ಶಾಂತಾ, ಯೋಗೀಶ್, ರಾಕೇಶ್ ಸೇರಿದಂತೆ ಮತ್ತಿತರೆ ಭಕ್ತರು ಪಾದಯಾತ್ರೆಯಲ್ಲಿದ್ದಾರೆ. ಇದು ಇವರ 19ನೇ ವರ್ಷದ ಪಾದಯಾತ್ರೆ ಆಗಿರುತ್ತದೆ.

error: Content is protected !!