ಜೋಳದ ಬೆಳೆ ನೆಲ ಸಮಗೊಳಿಸಿದ ದುಷ್ಕರ್ಮಿಗಳು

ಜೋಳದ ಬೆಳೆ ನೆಲ ಸಮಗೊಳಿಸಿದ ದುಷ್ಕರ್ಮಿಗಳು

ಹರಪನಹಳ್ಳಿ, ಫೆ.18- ತಾಲ್ಲೂಕಿನ ಕುಂಚೂರು ಗ್ರಾಮದ ಬಾಣದ ಬಸವರಾಜ್ ಎಂಬ ರೈತನ ಎರಡೂವರೆ ಎಕರೆ ಭೂಮಿಯಲ್ಲಿ ಒಂದೂವರೆ ಎಕರೆಗೂ ಅಧಿಕ ಊಟದ ಜೋಳದ ಸೊಪ್ಪೆಯನ್ನು ನೆಲಕ್ಕೆ ಉರುಳಿಸಿ ಅಮಾನವೀಯ ಕೃತ್ಯವನ್ನು ದುಷ್ಕರ್ಮಿಗಳು ಎಸಗಿದ್ದಾರೆ.

ಮಳೆಗಾಲದಲ್ಲಿ ಅತಿಯಾದ ಮಳೆಯಿಂದಾಗಿ ಬೆಳೆ ನಾಶವಾದ ಪರಿಣಾಮ ಇರುವ ಸ್ವಲ್ಪ ನೀರಾವರಿ ಭೂಮಿಯಲ್ಲೇ ಜೀವನ ನಿರ್ವಹಣೆಗಾಗಿ ಊಟದ ಜೋಳವನ್ನು ಹಾಕಿದ್ದೆ. ಈ ಬಾರಿಯ ಬೆಳೆಯು ತುಂಬಾ ಹಸನಾಗಿ ಬಂದಿತ್ತು ಎಂದು.

ಇನ್ನು ಒಂದೂವರೆ ತಿಂಗಳಿನಲ್ಲಿ ಕೊಯ್ಲು ಮಾಡುತ್ತಿದ್ದೆ. ಆದರೆ ಕಳೆದ ಎರಡು ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು ಕೈಗೆ ಬಂದ ಹಸಿ ಜೋಳದ ಸೊಪ್ಪೆಯನ್ನು ಕರುಣೆಯಿಲ್ಲದೆ ಬುಡ ಸಮೇತ ನೆಲಕ್ಕೆ ಉರುಳಿಸಿ ಕೈಗೆ ಬಂದ ತುತ್ತು ಬಾಯಿಗೆ ಸಿಗದಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.

ನನ್ನ ಅನ್ನವನ್ನು ಕಸಿದ ಕ್ರೂರಿಗಳಿಗೆ ದೇವರು ಅವರಿಗೆ ಎಂದೂ ಒಳ್ಳೆಯದನ್ನು ಮಾಡದಿರಲಿ ಎಂದು ದುಷ್ಕರ್ಮಿಗಳಿಗೆ ಹಿಡಿ ಶಾಪ ಹಾಕುತ್ತಾ, ತನ್ನ ನೋವನ್ನು ತೋಡಿಕೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ಪರಿಹಾರ ಒದಗಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ರೈತ ಬಾಣದ ಬಸವರಾಜ್ ತಿಳಿಸಿದ್ದಾರೆ.

error: Content is protected !!