ದಾವಣಗೆರೆ, ಫೆ.18- ಇಲ್ಲಿನ ಕೆಟಿಜೆ ನಗರದ 1ನೇ ಮುಖ್ಯ ರಸ್ತೆ, 12ನೇ ತಿರುವಿನಲ್ಲಿರುವ ಕುರುವತ್ತಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಕಳಸಾರೋಹಣವು ಹಿರೇಕುರುವತ್ತಿ ಹಿರೇಮಠದ ಶ್ರೀ ಸಿದ್ಧನಂದೀಶ್ವರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಸೋಮವಾರ ನೆರವೇರಿತು.
ಈ ವೇಳೆ ಕುರುವತ್ತಿ ಬಸವೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿ ಗಳು ಹಾಗೂ ಪ್ರಧಾನ ಅರ್ಚಕ ಎಂ.ಸಿ. ಚಂದ್ರಶೇಖರ್ ಇದ್ದರು.