ಆಟೋ ಚಾಲಕನ ಪ್ರಾಮಾಣಿಕತೆಗೆ ಶ್ಲ್ಯಾಘನೆ

ಆಟೋ ಚಾಲಕನ ಪ್ರಾಮಾಣಿಕತೆಗೆ ಶ್ಲ್ಯಾಘನೆ

ದಾವಣಗೆರೆ, ಫೆ.18- ನಗರದ ಆಟೋರಿಕ್ಷಾವೊಂದರಲ್ಲಿ ಪ್ರಯಾಣಿಕನೊಬ್ಬ ಬಿಟ್ಟು ಹೋಗಿದ್ದ ಬ್ಯಾಗನ್ನು, ಆಟೋ ಚಾಲಕ ಪ್ರಾಮಾಣಿಕತೆಯಿಂದ ಪೊಲೀಸರ ಮುಖೇನ ವಾರಸುದಾರರಿಗೆ ತಲುಪಿಸಿದ್ದಾನೆ.

ಇದೇ ದಿನಾಂಕ 15ರಂದು ಕಕ್ಕರಗೊಳ್ಳದ ಸುನೀಲ್ ಎಂಬುವವರು, ಆವರಗೆರೆಯ ಮಂಜುನಾಥ್‌ ಅವರ ಆಟೋದಲ್ಲಿ ಪ್ರಯಾಣಿಸಿ, ಬ್ಯಾಗನ್ನು ಆಟೋದಲ್ಲೇ ಮರೆತು ಹೋಗಿರುತ್ತಾರೆ. ಇದನ್ನರಿತ ಆಟೋ ಚಾಲಕ ಮಂಜುನಾಥ್‌ ಅವರು, ಇಲ್ಲಿನ ಆಜಾದ್ ನಗರ ಪೊಲೀಸ್ ಠಾಣೆಗೆ ತಂದು ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾನೆ.

ಪಿಎಸ್ಐ ಇಮ್ತಿಯಾಜ್, ಮಹಮ್ಮದ್ ಅಲ್ತಾಫ್ ಹಾಗೂ ಸಿಬ್ಬಂದಿ ಆಟೋ ಚಾಲಕನ ಪ್ರಾಮಾಣಿಕತೆಯನ್ನು ಶ್ಲ್ಯಾಘಿಸಿದ್ದಾರೆ.

error: Content is protected !!