ಅನಿಶ್ಚಿತ ಬದುಕಿಗೆ ಭಗವಂತನ ಅರಿವು ಅವಶ್ಯ

ಅನಿಶ್ಚಿತ ಬದುಕಿಗೆ ಭಗವಂತನ ಅರಿವು ಅವಶ್ಯ

ರಾಣೇಬೆನ್ನೂರಿನ `ಶಿವ ದರ್ಶನ’ ಪ್ರವಚನದಲ್ಲಿ ಶಿರಸಿಯ ಬ್ರಹ್ಮಾಕುಮಾರಿ ವೀಣಾಜೀ

ರಾಣೇಬೆನ್ನೂರು,ಫೆ.17- ಅನಿಶ್ಚಿತ ಬದುಕಿನ ಮನುಷ್ಯ ಶಿವಶರಣರ ವಚನಗಳನ್ನು ಅರ್ಥಮಾಡಿ ಕೊಂಡರೆ ಬದುಕಿಗೆ ಸಾರ್ಥಕತೆ ಸಿಗುತ್ತದೆ. ಆ ಮೂಲಕ ನಮ್ಮನ್ನ ನಾವು ಅರಿತು, ನಮ್ಮಲ್ಲಿರುವ ಭಗವಂತನನ್ನು ಕಾಣುವುದರೊಂದಿಗೆ ಬದುಕು ಸಾಗಿಸಬೇಕು ಎಂದು ಶಿರಸಿಯ ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾ ಹೇಳಿದರು. 

ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ  ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯ ಏರ್ಪಡಿಸಿರುವ 89ನೇ ಶಿವರಾತ್ರಿ ಆಚರಣೆಯ  ಮೂರು ದಿನಗಳ `ಶಿವ ದರ್ಶನ’ ಪ್ರವಚನ ಮಾಲೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ತಂದೆ-ತಾಯಿ ಜೀವ ಕೊಟ್ಟರೆ, ಬದುಕು ಕೊಟ್ಟವ ಭಗವಂತ. ತನ್ನ ಅರಿವೇ ತನಗೆ ಗುರು ಎನ್ನುವ ವಾಸ್ತವ ಅರಿತು ಜ್ಞಾನಿಯಾದರೆ ಜೀವನ ಪಾವನವಾಗಲಿದೆ. ನಮ್ಮ ಅನಿಶ್ಚಿತ ಬದುಕಿಗೆ ಇದು ಮಾರ್ಗದರ್ಶನವಾಗಲಿದೆ ಎಂದು  ಅವರು  ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರಕಾಶ ಕೋಳಿವಾಡ, ಮನುಷ್ಯನ ಅಜ್ಞಾನ ದೂರವಾಗಲು ಅಧ್ಯಾತ್ಮದ ಶಿಕ್ಷಣ ಅವಶ್ಯವಿದೆ. ಈ ಪ್ರವಚನ ಮಾಲೆ ಸರ್ವರ ಅಜ್ಞಾನ ದೂರಾಗಿಸಿ,  ಜ್ಞಾನದ ಬೆಳಕು ತರಲಿದೆ ಎಂದರು.

ವೇದಿಕೆಯಲ್ಲಿ ದಾನಿ ಹನುಮಂತಪ್ಪ ಕಾಕಿ, ಪಿಕೆಕೆ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ನಿವೃತ್ತ ಸಬ್‌ಇನ್ಸ್‌ಪೆಕ್ಟರ್.  ಕೆ.ಸಿ. ಕೋಮಲಾಚಾರಿ, ಜೇಸಿ ಅಧ್ಯಕ್ಷ ಕುಮಾರ ಬೆಣ್ಣಿ ಮತ್ತಿತರರಿದ್ದರು. ಬಿ.ಕೆ. ಶಿವದೇವಿ ಸ್ವಾಗತಿಸಿದರು. ಬಿ.ಕೆ. ಕಸ್ತೂರಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಗಚ್ಚಿನಮಠ ಪ್ರಾರ್ಥಿಸಿ ದರು. ಸಕಲ ವಾದ್ಯವೃಂದದವರೊಂದಿಗೆ ವಿಶ್ವ ಏಕತಾ ಸದ್ಭಾವನಾ ಯಾತ್ರೆ ನಡೆಸಲಾಯಿತು.

error: Content is protected !!