ಜಿಲ್ಲೆಯಲ್ಲಿ ಭತ್ತದ ನಾಟಿ ಕಾರ್ಯ ಆರಂಭ ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಸಲಹೆ

ಜಿಲ್ಲೆಯಲ್ಲಿ ಭತ್ತದ ನಾಟಿ ಕಾರ್ಯ ಆರಂಭ  ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಸಲಹೆ

ದಾವಣಗೆರೆ,ಫೆ.14- ಜಿಲ್ಲೆ ಯಾದ್ಯಂತ ಪ್ರಸಕ್ತ ಬೇಸಿಗೆ ಹಂಗಾ ಮಿನ  ಭತ್ತದ  ನಾಟಿ ಕಾರ್ಯ ಪ್ರಾರಂಭವಾಗಿದ್ದು, ಭತ್ತದ ಬೆಳೆಯ ಉತ್ತಮ ಬೆಳವಣಿಗೆ ಹಾಗೂ ಇಳುವರಿ ಹೆಚ್ಚಿಸಲು ಅಗತ್ಯ ಪೋಷಕಾಂಶಗಳ ನಿರ್ವಹಣೆ ಮುಖ್ಯವಾಗಿ ರುತ್ತದೆ  ಈ ಕುರಿತಂತೆ  ಜಂಟಿ ಕೃಷಿ ನಿರ್ದೇಶಕರು  ರೈತರಿಗೆ ಸಲಹೆ ನೀಡಿದ್ದಾರೆ.

ಹಸಿರೆಲೆ ಗೊಬ್ಬರ:   ಭತ್ತದ ಬೆಳೆಯಲ್ಲಿ ದಯಾಂಚ (10-15 ಕಿ.ಗ್ರಾಂ ಬೀಜ ಪ್ರತಿ ಎಕರೆಗೆ), ಸೆಣಬು   (10-15 ಕಿ.ಗ್ರಾಂ ಬೀಜ ಪ್ರತಿ ಎಕರೆಗೆ), ಅಲಸಂದೆ (10-12 ಕಿ.ಗ್ರಾಂ ಬೀಜ ಪ್ರತಿ ಎಕರೆಗೆ), ಹೆಸರು ಮತ್ತು ಉದ್ದು (6-8 ಕಿ.ಗ್ರಾಂ ಬೀಜ ಪ್ರತಿ ಎಕರೆಗೆ) ಹಸಿರೆಲೆ ಗೊಬ್ಬರದ ಗಿಡಗಳನ್ನು  ಬೆಳೆದು ಹೂ ಬಿಡುವ ಮೊದಲು ಉಳುಮೆ ಮಾಡಿ ಭೂಮಿಗೆ ಸೇರಿಸುವುದರಿಂದ ಎಕರೆಗೆ 4 ರಿಂದ 8 ಟನ್ ಹಸಿರು ಗೊಬ್ಬರವನ್ನು ಭೂಮಿಗೆ ಸೇರಿಸಬಹುದು. ಚೌಳು ಜೌಗು ಹಾಗೂ ಕಡಿಮೆ ಫಲವತ್ತಾದ ಭೂಮಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆಯಿಂದ ಸಾವಯವ ಇಂಗಾಲ, ಸಾರಜನಕ ಲಭ್ಯತೆ ಹೆಚ್ಚಾಗುವುದಲ್ಲದೆ, ಭೂಮಿಯಲ್ಲಿ ಕಾಲಕ್ರಮೇಣ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ಸುಧಾರಿಸುತ್ತವೆ. 

ಅಜೋಸ್ಪೈರಿಲಂ ಜೀವಾಣು ಬಳಕೆ: ಸಸಿಮಡಿಗಳಲ್ಲಿ ಅಜೋಸ್ಪೈರಿಲಂ ಜೀವಾಣುವನ್ನು  ಬಳಕೆ ಮಾಡದಿದ್ದಲ್ಲಿ, ಸಸಿ ಮಡಿಯಿಂದ ಸಸಿಗಳನ್ನು ಕಿತ್ತ ನಂತರ ಬೇರುಗಳನ್ನು 400 ಗ್ರಾಂ ಅಜೋಸ್ಪೈರಿಲಂ ಜೈವಿಕ ಗೊಬ್ಬರದ ದ್ರಾವಣದಲ್ಲಿ ಅದ್ದಿ ಉಪಚಾರ ಮಾಡಿದ ನಂತರ ನಾಟಿ ಮಾಡುವುದು. ನಾಟಿ ಮಾಡಲು ಮೂರು ವಾರಗಳ ಮೊದಲೇ 4 ರಿಂದ 5 ಟನ್ ಕಳಿತ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟನ್ನು ಮಣ್ಣಿನಲ್ಲಿ ಬೆರೆಸುವುದು.

ಬೇಸಿಗೆ ಭತ್ತಕ್ಕೆ 50:25:25 ಕಿ.ಗ್ರಾಂ ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂ ಪ್ರತಿ ಎಕರೆಗೆ ಶಿಫಾರಸ್ಸಿದ್ದು,  ಶೇ. 50 ರಷ್ಟು ಸಾರಜನಕ, ಪೂರ್ತಿ ರಂಜಕ ಮತ್ತು ಶೇ. 50 ರಷ್ಟು ಪೊಟ್ಯಾಶ್‍ನ್ನು ನಾಟಿ ಸಮಯದಲ್ಲಿ ನೀಡುವುದು. 

ನಾಟಿ ಮಾಡಿದ 25 ರಿಂದ 30 ದಿನಗಳಲ್ಲಿ ಶೇ. 25 ರಷ್ಟು ಸಾರಜನಕ ಮತ್ತು ನಾಟಿ ಮಾಡಿದ 60 ದಿನಗಳಲ್ಲಿ ಶೇ.25 ರಷ್ಟು ಸಾರಜನಕ ಮತ್ತು ಶೇ. 50ರಷ್ಟು ಪೊಟ್ಯಾಶ್‍ನ್ನು ಒದಗಿಸುವ ರಸಗೊಬ್ಬರ ಗಳನ್ನು ಮೇಲುಗೊಬ್ಬರವಾಗಿ ನೀಡುವುದು.

ಯಂತ್ರಚಾಲಿತ ನಾಟಿ, ಕೂರಿಗೆ ಬಿತ್ತನೆಯಿಂದ ಕೃಷಿ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿ ರುವುದರಿಂದ ತಮ್ಮ ತಮ್ಮ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

error: Content is protected !!