ಹರಪನಹಳ್ಳಿಯಲ್ಲಿ ಐದನೇ ದಿನಕ್ಕೆ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ

ಹರಪನಹಳ್ಳಿಯಲ್ಲಿ ಐದನೇ ದಿನಕ್ಕೆ  ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ

ಹರಪನಹಳ್ಳಿ, ಫೆ.14- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಗ್ರಹಿಸಿ ಗ್ರಾಮ ಆಡಳಿತಾಧಿಕಾರಿ ಗಳು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ ಐದನೇ ದಿನಕ್ಕೆ ಕಾಲಿಟ್ಟಿದೆ.

ಸಾರ್ವಜನಿಕರ ಕೆಲಸಗಳನ್ನು ನಿಗದಿತ ಅವಧಿಯೊಳಗೆ ನಿರ್ವಹಿಸಲು ಸುಸಜ್ಜಿತ ಕಚೇರಿ, ಕಂಪ್ಯೂಟರ್, ಪ್ರಿಂಟರ್, ಮೊಬೈಲ್ ಹಾಗೂ ಅಂತರ್ ಜಿಲ್ಲಾ ವರ್ಗಾವಣೆಗೆ ಸೇರಿದಂತೆ, ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಗ್ರಾಮ ಆಡಳಿತಾಧಿಕಾರಿಗಳು ಒತ್ತಾಯಿಸಿದರು.

ಇದೇ ವೇಳೆ ಕಾರ್ಯ ನಿಮಿತ್ತ ಹರಪನಹಳ್ಳಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರಿಗೆ ಗ್ರಾಮ ಆಡಳಿತಾಧಿಕಾರಿಗಳ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಿದರು.

 ರಾಜ್ಯಾದ್ಯಂತ ಗ್ರಾಮ ಆಡಳಿತಾಧಿಕಾರಿಗಳ ಹೋರಾಟ ನಡೆಯುತ್ತಿದ್ದು, ಅವರ ಹೋರಾಟವನ್ನು ಸರ್ಕಾರ ಪರಿಗಣಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.

ಮುಷ್ಕರದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಶಶಿಕುಮಾರ ಗುಡಿಯಪ್ಪರ, ಉಪಾಧ್ಯಕ್ಷ ಜಿ.ಕೊಟ್ರೇಶ್, ಪ್ರಧಾನ ಕಾರ್ಯದರ್ಶಿ ಕೆ.ಸಿದ್ದೇಶ್, ಖಜಾಂಚಿ ಸುರೇಶ್, ರಾಜ್ಯ ಸಂಘದ ವಿಭಾಗೀಯ ಆಂತರಿಕ ಲೆಕ್ಕಪರಿಶೋಧಕ ಉತ್ತಂಗಿ ಯರಿಸ್ವಾಮಿ, ಮಹಿಳಾ ಉಪಾಧ್ಯಕ್ಷೆ ಎಸ್.ಕೆ.ಶೃತಿ, ಹಿರಿಯ ಗ್ರಾಮ ಆಡಳಿತಾಧಿಕಾರಿಗಳಾದ ಅರವಿಂದ್ ಡಿ.ಸಂಡೂರು, ರಾಜಪ್ಪ, ನಾಗರಾಜ, ನನ್ನೆಸಾಬ್, ರಾಜಶೇಖರ್, ಮಂಜುನಾಥ, ಎಚ್.ಕವಿತಾ, ಗೀತಾ, ಸುಧಾ, ರಾಜೇಶ್ವರಿ ಭಾಗವಹಿಸಿದ್ದರು.

error: Content is protected !!