ದಾವಣಗೆರೆ ಫೆ 13 – ಗುರು-ಹಿರಿಯರ ಹಬ್ಬವೆಂದು ಪ್ರತೀತಿ ಹೊಂದಿರುವ ಷರಬಾನ್ ಹಬ್ಬವು ನಗ ರಾದ್ಯಂತ ಮುಸ್ಲಿಂ ಬಾಂ ಧವರು ಇಂದು ಮಸೀದಿ ಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಜಾಗರಣೆ ಆಚರಿಸಿದರು. ಎರಡನೇ ದಿನ ರಾತ್ರಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಈದ್ಗಾಗಳಿಗೆ ತೆರಳಿ ತಮ್ಮ ಸಂಬಂಧಿಗಳ, ಹಿರಿಯರ ಘೋರಿಗಳಿಗೆ ಸುಗಂಧ ಹೂ ಅರ್ಪಿಸಿ ದುವಾ ಮಾಡಿದರು. ವಿವಿಧ ಪ್ರದೇಶಗಳಿಂದ ಮಸೀದಿಗಳ ಪೇಷ್ ಇಮಾಂರೊಂದಿಗೆ ತಂಡ ತಂಡವಾಗಿ ಈದ್ಗಾದತ್ತ ಹೆಜ್ಜೆ ಹಾಕಿದ ಮಕ್ಕಳು ಇಡೀ ರಾತ್ರಿ ಪ್ರಾರ್ಥನೆಯನ್ನು ಸಲ್ಲಿಸಿ ಉಪವಾಸ ಆಚರಿಸಿದರು. ಚಿಕ್ಕ ಹೆಣ್ಣು ಮಕ್ಕಳು ಬಣ್ಣ – ಬಣ್ಣದ ಸೀರೆಗಳನ್ನು ಧರಿಸಿಕೊಂಡು ಖುಷಿಯಲ್ಲಿ ಮಿಂದು ತಮ್ಮ ಹಿರಿಯರ ಸ್ಮರಣೆಗೆ ನಾಂದಿಯಾದರು.
ಷಬಾನ್ ಖುಷಿಯಲ್ಲಿ ಮಿಂದ ಮಕ್ಕಳು..!
