ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶ್ರೀ ಶ್ಲ್ಯಾಘನೆ
ಜಗಳೂರು, ಫೆ. 14 – ಜನರ ಭಾವನೆಗಳಿಗೆ ಶ್ರೀ ಶಾಂತವೀರ ಸ್ವಾಮೀಜಿಗಳು ಉಸಿರಾಗಿದ್ದರು ಎಂದು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸಂತೆ ಮೈದಾನದಲ್ಲಿ ಅವಧೂತ ಶಾಂತವೀರ ಸ್ವಾಮೀಜಿಗಳ 35ನೇ ಜಾತ್ರೋತ್ಸವ ಪ್ರಯುಕ್ತ ಭಕ್ತರು ಗುರುವಾರ ಏರ್ಪಡಿಸಿದ್ದ ಅನ್ನ ಸಂತರ್ಪಣೆಗೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.
ದೀರ್ಘಕಾಲ ಅವರು ನೆಲೆಸಿದ ಈ ಪುಣ್ಯಕ್ಷೇತ್ರ ಇಂದಿಗೂ ಕರ್ನಾಟಕದ ಪುಣ್ಯಕ್ಷೇತ್ರ ಸಂಗಮವಾಗಿದೆ. ಕಣ್ವಕುಪ್ಪೆಯಲ್ಲಿ ನೆಲೆಸಿದ್ದ ಅವರು ಕೆಲ ವರ್ಷಗಳ ನಂತರ ಕಂದಿಕೇರೆ ಗ್ರಾಮಕ್ಕೆ ತೆರಳಿ ಅಲ್ಲಿ ನಾಲ್ಕಾರು ವರ್ಷಗಳ ಕಾಲ ಜೀವಿಸಿ, ಅಲ್ಲಿಯೂ ಪವಾಡಗಳನ್ನು ಮಾಡುವ ಮೂಲಕ ಜನರಿಗೆ ಅವಧೂತರಾಗಿ ಅಲ್ಲಿಯೇ ಲಿಂಗೈಕ್ಯರಾದರು.
30 ವರ್ಷಗಳ ಕಾಲ ಕಣ್ವಕುಪ್ಪೆ ಗವಿಮಠದಲ್ಲಿ ನೆಲೆಸಿದ್ದ ಸಿದ್ಧಿಪುರುಷರಾದ ಶಾಂತವೀರ ಸ್ವಾಮೀಜಿಗಳು ಶ್ರದ್ಧಾ-ಭಕ್ತಿಯ ಕಾಮಧೇನುವಾಗಿದ್ದರು. ಜಗಳೂರು ಪಟ್ಟಣದಲ್ಲಿ ಅವರು ಮಾಡಿದ ಪವಾಡಗಳನ್ನು ಜನ ಇಂದಿಗೂ ಮರೆತಿಲ್ಲ ಎಂದು ಸ್ಮರಿಸಿದರು.
ಕಂದಿಕೆರೆಯಲ್ಲಿ ಶಾಂತವೀರ ಸ್ವಾಮೀಜಿಗಳ ರಥೋತ್ಸವ ಅದ್ಧೂರಿ ಯಾಗಿ ಜರುಗುತ್ತಿದ್ದು ಜಗಳೂರು ತಾಲೂಕಿನ ಅನೇಕ ಭಕ್ತರು ಸಿದ್ಧಿಪುರುಷರ ಸ್ಮರಣಾರ್ಥ ಇದೇ ಮೊದಲ ಬಾರಿಗೆ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಿರುವುದು ನಿಜಕ್ಕೂ ಪುಣ್ಯ ಗಳಿಸಿದ ಕಾರ್ಯವಾಗಿದೆ ಎಂದು ಶ್ರೀ ಗಳು ತಿಳಿಸಿದರು.
ಅನ್ನ ದಾಸೋಹದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಪ.ಪಂ. ಅಧ್ಯಕ್ಷ ನವೀನ್ ಕುಮಾರ್, ಬಿದರಕೆರೆ ರವಿಕುಮಾರ್, ಅಜ್ಜಣ್ಣ, ಮರೇನಹಳ್ಳಿ ಶೇಖರಪ್ಪ, ತಾ.ಪಂ. ಮಾಜಿ ಸದಸ್ಯ ಕುಬೇರಪ್ಪ, ಗಿರೀಶ್, ಶಾಮಣ್ಣ ಕಾಮಗೇತನಹಳ್ಳಿ, ಗಂಗಾಧರ್,ಪಪಂ ಸದಸ್ಯ ರಮೇಶ್‍ರೆಡ್ಡಿ, ಪಾಪಲಿಂಗಪ್ಪ, ನಿಬಗೂರು ಕೃಷ್ಣಪ್ಪ, ಗೌರಿಪುರ ಶಿವಣ್ಣ, ಸುಧೀರ್ ರೆಡ್ಡಿ , ಜೆಸಿಬಿ ರಾಜು, ಲಿಂಗಣ್ಣನಹಳ್ಳಿ ತಿಮ್ಮರಾಯಪ್ಪ, ಮಾಳಮ್ಮನಹಳ್ಳಿ ಆನಂದ್, ಸುರೇಶ್ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ಅನ್ನ ಸಂತರ್ಪಣೆ ನೆರವೇರಿಸಿದರು.