ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಅರಿವಿನ ಜಾತ್ರೆಗೆ ವಿಧ್ಯುಕ್ತ ಚಾಲನೆ

ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಅರಿವಿನ ಜಾತ್ರೆಗೆ ವಿಧ್ಯುಕ್ತ ಚಾಲನೆ

ಗಮನ ಸೆಳೆದ ವಸ್ತು ಪ್ರದರ್ಶನ, ಉದ್ಯೋಗ ಮೇಳ, ಫಲಪುಷ್ಪ ಪ್ರದರ್ಶನ, ವಿಚಾರಗೋಷ್ಠಿ, ನೃತ್ಯ ನಾಟಕ ಪ್ರದರ್ಶನ

ಮಲೇಬೆನ್ನೂರು, ಫೆ.8- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಶನಿವಾರ ಬೆಳಿಗ್ಗೆ ಶಾಸಕ ಬಿ.ಪಿ.ಹರೀಶ್ ಅವರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧ್ವಜಾರೋಹಣ ಮಾಡುವ ಮೂಲಕ 7ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಅರಿವಿನ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಇದಕ್ಕೂ ಮುನ್ನ ಶ್ರೀಗಳು ಹಾಗೂ ಶಾಸಕರು, ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದ ಪುರಿ ಶ್ರೀಗಳವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಬಿ.ಪಿ.ಹರೀಶ್ ಮಾತನಾಡಿದರು.

ಧ್ವಜಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿ, ರಾಜಕಾರಣಿಗಳು ಅಧಿಕಾರಕ್ಕಾಗಿ ಪಾದಯಾತ್ರೆ ಮಾಡುತ್ತಾರೆ. 

ಆದರೆ,  ವಾಲ್ಮೀಕಿ ಶ್ರೀಗಳು, ಸಮಾಜಕ್ಕಾಗಿ 350 ಕಿ.ಮೀ ಪಾದಯಾತ್ರೆ ಮಾಡಿ, 257 ದಿನ ಧರಣಿ ಸತ್ಯಾಗ್ರಹ ನಡೆಸಿ, ಸಮಾಜಕ್ಕೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ ಎಂದು ಶ್ಲ್ಯಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಗಳೂರು ಕ್ಷೇತ್ರದ ಶಾಸಕರೂ, ವಾಲ್ಮೀಕಿ ಜಾತ್ರೆ ಸಮಿತಿ ಅಧ್ಯಕ್ಷರೂ ಆದ ಎಂ.ದೇವೇಂದ್ರಪ್ಪ ಮಾತನಾಡಿ, ವಾಲ್ಮೀಕಿ ಜಾತ್ರೆ ಆಚರಣೆ ಸಮಾಜ ದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದ್ದು, ಸಮಾಜಕ್ಕೆ ದಿಕ್ಸೂಚಿಯಾಗಿದೆ ಎಂದು ಶ್ರೀಗಳನ್ನು ಅಭಿನಂದಿಸಿದರು.

ಜಾತ್ರಾ ಸಮಿತಿ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ, ಮಠದ ಧರ್ಮದರ್ಶಿಗಳಾದ ಹೊಸಪೇಟೆ ಜಂಬಯ್ಯ ನಾಯಕ, ಕೆ.ಬಿ.ಮಂಜುನಾಥ್, ಹರಿಹರ ನಗರಸಭೆ ಅಧ್ಯಕ್ಷೆ ಶ್ರೀಮತಿ ಕವಿತಾ ಮಾರುತಿ ಬೇಡರ್, ಮಲೇಬೆನ್ನೂರು ಪುರಸಭೆ ಹನುಮಂತಪ್ಪ, ರಾಜನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ ಪರಶುರಾಮಪ್ಪ, ಉಪಾಧ್ಯಕ್ಷ ಎ.ಕೆ.ನಾಗೇಂದ್ರಪ್ಪ, ಹರಿಹರ ತಾ. ಗ್ರಾ. ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಹರಿಹರ ತಾ. ಗ್ರಾ. ಜಾತ್ರಾ ಸಮಿತಿ ಅಧ್ಯಕ್ಷ ಕೆ.ಬೇವಿನಹಳ್ಳಿ ಹಾಲೇಶ್, ಹರಿಹರ ನಗರ ಅಧ್ಯಕ್ಷೆ ಪಾರ್ವತಿ ಬೋರಯ್ಯ, ವಿಜಯಶ್ರೀ ಮಹೇಂದ್ರಕುಮಾರ್, ಗೌರಮ್ಮ ಮಂಜುನಾಥ್, ನಿವೃತ್ತ ಶಿಕ್ಷಕ ಜಿ.ಆರ್.ನಾಗರಾಜ್, ರಾಜನಹಳ್ಳಿ ಭೀಮಣ್ಣ, ಪತ್ರಕರ್ತ ಪ್ರಕಾಶ್, ಎಂ.ಎನ್.ಕೋಟೆ ಕುಮಾರ್, ನಿವೃತ್ತ ಯೋಧ ಅಂಚಲಪ್ಪ ತಳವಾರ ಮತ್ತು ಇತರರು ಈ ವೇಳೆ ಹಾಜರಿದ್ದರು.

ಮೆರವಣಿಗೆ : ಧ್ವಜಾರೋಹಣ ಕಾರ್ಯಕ್ರಮದ ನಂತರ ರಾಜನಹಳ್ಳಿ ಗ್ರಾಮದಿಂದ ಶ್ರೀಮಠದವರೆಗೆ ಶ್ರೀ ವಾಲ್ಮೀಕಿ ಪ್ರತಿಮೆಯ ಭವ್ಯ ಮೆರವಣಿಗೆ ಸಂಭ್ರಮದಿಂದ ಜರುಗಿತು.

ಮೇಳ ಉದ್ಘಾಟನೆ : ಜಾತ್ರೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಹಮ್ಮಿಕೊಂಡಿರುವ ವಸ್ತು ಪ್ರದರ್ಶನವನ್ನು ಶ್ರೀಗಳ ಸಾನ್ನಿಧ್ಯದಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ ಉದ್ಘಾಟಿಸಿದರು. ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಏರ್ಪಡಿಸಿರುವ ಉದ್ಯೋಗ ಮೇಳಕ್ಕೆ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಚಾಲನೆ ನೀಡಿದರು.

error: Content is protected !!