ಜಾತಿ ಮಾನವನ ಹುಟ್ಟಿನಿಂದ ಬಂದದ್ದಲ್ಲ

ಜಾತಿ ಮಾನವನ ಹುಟ್ಟಿನಿಂದ ಬಂದದ್ದಲ್ಲ

ಹರಿಹರ : ಹರಿಹರ ತಾಲ್ಲೂಕು ಆಡಳಿತದ ಸವಿತಾ ಮಹರ್ಷಿ ಜಯಂತ್ಯೋತ್ಸವದಲ್ಲಿ ತಹಶೀಲ್ದಾರ್ ಗುರುಬಸವರಾಜ್

ಹರಿಹರ, ಫೆ. 9 – ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜ ತನ್ನದೇ ಆದ ಪರಂಪರೆಯನ್ನು ಹೊಂದಿದ್ದು. ಸವಿತಾ ಮಹರ್ಷಿ ಈ ಸಮಾಜದ ಮೂಲ ಪುರುಷರಾಗಿದ್ದು. ಅವರು ಹಾಕಿಕೊಟ್ಟಿರುವ ಧರ್ಮ ಸಂದೇಶದಂತೆ ಇಂದಿಗೂ ತಮ್ಮ ಕಾಯಕ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಹಶೀಲ್ದಾರ್‌ ಕೆ.ಎಂ. ಗುರುಬಸವರಾಜ.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಸವಿತಾ ಸಮಾಜ ಸಂಯುಕ್ತಾಶ್ರಯದಲ್ಲಿ, ನಗರದ ತಾಲ್ಲೂಕು ಕಛೇರಿ ಸಭಾ ಭವನದಲ್ಲಿ ಏರ್ಪಡಿಸಿದ್ದ ಸವಿತಾ ಮಹರ್ಷಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ ಅವರು ಮಾತನಾಡಿದರು. 

ಜಾತಿ ಮಾನವ ಹುಟ್ಟಿನಿಂದ ಬಂದದ್ದಲ್ಲ. ಅವರು ಮಾಡುತ್ತಿರುವ ಕಾಯಕದಿಂದ ಜಾತಿ ಸೃಷ್ಠಿಯಾಗಿದೆ. ಆಂಧ್ರದಿಂದ ದೇಶದ ಎಲ್ಲಾ ರಾಜ್ಯಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಈ ಸಮಾಜದಲ್ಲಿ 27 ಉಪ ಜಾತಿಗಳಿವೆ. ಅದರಲ್ಲಿ ಹಡಪದ ಸಮಾಜದವರು 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಪುರುಷ ಬಸವನ್ಣನವರಿಂದ ಲಿಂಗ ದೀಕ್ಷೆ ಪಡೆದಿದ್ದಾರೆ ಎಂದು ಅವರು ಹೇಳಿದರು. 

ರಾಜ್ಯದ ಗಡಿ ನಾಡಿನ ವಿವಿದೆಡೆ ಇವರುಗಳು ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಸವಿತಾ ಸಮಾಜ, ಉತ್ತರ ಕರ್ನಾಟಕದಲ್ಲಿ ಹಡಪದ, ದಕ್ಷಿಣ ಕನ್ನಡದಲ್ಲಿ ಭಂಡಾರಿ, ಹಾಗೂ ಇನ್ನಿತರೆ ಭಾಗದಲ್ಲಿ ನಾವಿ, ನಯನ ಕ್ಷೇತ್ರಿಯ ಎಂಬ ನಾಮಾಂಕಿತದಿಂದ ಕರೆಯಲ್ಪಡುವ ಇವರುಗಳೆಲ್ಲಾ ಮೂಲತಃ ಆಂಧ್ರದವರೆಂದು ಇತಿಹಾಸ ಮೂಲಗಳಿಂದ ತಿಳಿದು ಬಂದಿದೆ, ಇತ್ತಿಚಿನ ದಿನಗಳಲ್ಲಿ ದಕ್ಷಿಣ ಭಾರತದಿಂದ ಬಂದಿರುವ ಬ್ಯೂಟಿ ಪಾರ್ಲರ್, ಸ್ಪಾ, ಇನ್ನಿತರೆ ಉದ್ಯಮಗಳಿಂದ ಇವರ ಮೂಲ ಕಸುಬಿಗೆ ಹಾನಿಯಾಗುತ್ತಿದೆ ಎಂದು ತಿಳಿದು ಬಂದಿದೆ. ಕುಲ ಕಸುಬು ಅಭಿವೃದ್ಧಿಗಾಗಿ ಇರುವ ಸರ್ಕಾರದ ಯೋಜನೆಗಳ ಲಾಬ ಪಡೆಯಲು ಮುಂದಾಗಬೇಕೆಂದು ತಹಶೀಲ್ದಾರ್‌ ಹೇಳಿದರು.

ತಾಲ್ಲೂಕು ಆರೋಗ್ಯ ಇಲಾಖೆಯ ಭೂಮೇಶ್, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ದಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ರಾಜಸ್ವ ನಿರೀಕ್ಷಕ ಸಮೀರ್‌ ಅಹ್ಮದ್, ಗ್ರಾಮ ಲೆಕ್ಕಾಧಿಕಾರಿ ಹೆಚ್.ಜಿ. ಹೇಮಂತಕುಮಾರ್‌, ಸಂತೋಷ, ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು, ಮಾಜಿ ಅಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಮಂಜುನಾಥ, ಸಮಿತಿ ಸದಸ್ಯರುಗಳಾದ ಸಿ.ಎನ್. ಗೋಪಾಲಸ್ವಾಮಿ, ಹೆಚ್.ಡಿ. ದಿವಾಕರ್, ಸಂತೋಷ, ಆನಂದ, ಆರ್. ಕಿರಣಕುಮಾರ್‌, ಮಂಜುನಾಥ ಶ್ರೀಧರ ಇದ್ದರು.

error: Content is protected !!