ದಾವಣಗೆರೆ, ಫೆ. 7- ಗಾನಯೋಗಿ ಶಿವಯೋಗಿ ಸಂಗೀತ ಜಗದ್ಗುರು ಪಂಡಿತ ಪಂಚಾಕ್ಷರಿ ಗವಾಯಿಗಳವರ 133ನೇ ಜಯಂತೊತ್ಸವವನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಅಂಗವಿಕಲರ ಆಶಾ ಕಿರಣ ಟ್ರಸ್ಟ್ ವಿಶೇಷ ಮಕ್ಕಳೊಂದಿಗೆ ಹಣ್ಣು ವಿತರಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರು ಸೌಮ್ಯ ಸತೀಶ್ ಧಾರವಾಡ, ಪ್ರಧಾನ ಕಾರ್ಯದರ್ಶಿ ಮಮತಾ ನಾಗರಾಜ್, ಪದಾಧಿಕಾರಿಗಳು ಶಾಂತ ಶಿವಶಂಕರ್, ತನುಜಾ ಬೆಳ್ಳುಳ್ಳಿ, ಜ್ಯೋತಿ ಬೆಳ್ಳಿಗಾವಿ, ರತ್ನ ಕಾಟವೆ, ದೀಪ, ರಾಜಶ್ರೀ, ಸುಮಾ, ರೇಖಾ, ಮತ್ತು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.