ಸೈಕಲ್‌ ಸಂಚಾರಿ ರಮೇಶ್ ಪೂಜಾಗೆ ಸನ್ಮಾನ

ಸೈಕಲ್‌ ಸಂಚಾರಿ ರಮೇಶ್ ಪೂಜಾಗೆ ಸನ್ಮಾನ

ದಾವಣಗೆರೆ, ಫೆ.7- ಬೆಳಗಾವಿ ಜಿಲ್ಲೆ ಸಂಕೇಶ್ವರ ಪಟ್ಟಣದಿಂದ ಕಡೂರಿನ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಸೈಕಲ್‌ ಮೂಲಕ ಏಕಾಂಗಿಯಾಗಿ ಪ್ರಯಾಣಿಸಿ, ಹಿಂದಿರುತ್ತಿದ್ದ ರಮೇಶ್ ಪೂಜಾ ಅವರಿಗೆ ನಗರದಲ್ಲಿ ಎಸ್.ಎಸ್ ಫಿಟ್ನೆಸ್ ಯೋಗ ಮತ್ತು ಸ್ಪೋರ್ಟ್ಸ್ ಸೆಂಟರ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಈ ವೇಳೆ ಬೈಸಿಕಲ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಕಾರ್ಯದರ್ಶಿ ಮಹೇಶ್, ಸಂಘದ ಸದಸ್ಯ ಕಿರಣ್, ಅಮರನಾಥ ಸೇರಿದಂತೆ ಇತರರು ಮುಂದಿನ ಪ್ರಯಾಣಕ್ಕೆ ಶುಭ ಕೋರಿ ಫಲಹಾರ ನೀಡಿದರು.

error: Content is protected !!