ಕರ್ಕಶ ಶಬ್ಧಗಳ ಸೈಲೆನ್ಸರ್ ನಾಶ: ದ್ವಿಚಕ್ರ ಸವಾರರಿಗೆ ಎಚ್ಚರಿಕೆ

ಕರ್ಕಶ ಶಬ್ಧಗಳ ಸೈಲೆನ್ಸರ್ ನಾಶ: ದ್ವಿಚಕ್ರ ಸವಾರರಿಗೆ  ಎಚ್ಚರಿಕೆ

ಹರಿಹರ, ಫೆ.5- ದ್ವಿಚಕ್ರ  ವಾಹನ ಚಾಲಕರು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕರ್ಕಶ ಶಬ್ಧ ಹೊರಡಿಸುವ ಸೈಲೆನ್ಸರ್ ಮತ್ತು  ಕಣ್ಣಿಗೆ ಕುಕ್ಕುವಂತಹ ಹೆಡ್ ಲೈಟ್‌ಗಳನ್ನು  ಅಳವಡಿಸದಂತೆ ನಗರ ಪೊಲೀಸ್ ವೃತ್ತ ನಿರೀಕ್ಷಕ ಎಸ್. ದೇವಾನಂದ್  ಎಚ್ಚರಿಸಿದ್ದಾರೆ.

ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ  ವಶಪಡಿಸಿಕೊಂಡಿದ್ದ  ದ್ವಿಚಕ್ರ ವಾಹನಗಳ ಸೈಲೆನ್ಸರ್ ಪೈಪುಗಳನ್ನು  ರೋಡ್‌ ರೋಲರ್ ಮೂಲಕ ನಾಶಪಡಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ನಗರದಲ್ಲಿ ಕಳೆದ ಆರು ತಿಂಗಳಲ್ಲಿ ನಡೆದ ರಸ್ತೆ ಸುರಕ್ಷತಾ ಸಪ್ತಾಹ ಸಮಯದಲ್ಲಿ, ವಾಹನ ಸವಾರರು ಶೋಕಿಗಾಗಿ  ಅಳವಡಿಸಿಕೊಂಡಿದ್ದ ಸೈಲೆನ್ಸರ್ ಪೈಪ್  ಕಣ್ಣಿಗೆ ಕುಕ್ಕುವಂತ ಹೆಡ್ ಲೈಟ್‌ಗಳುಳ್ಳ   ವಾಹನಗಳನ್ನು ವಶಕ್ಕೆ  ಪಡೆದು ದಂಡವನ್ನು ಹಾಕಲಾಗಿತ್ತು. ವಶಪಡಿಸಿಕೊಂಡ  ಸೈಲೆನ್ಸರ್‌ಗಳನ್ನು  ಇಂದು ನಾಶಪಡಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಎಸ್ಐ ಮನಸೂರ್ ಆಹ್ಮದ್, ಪೊಲೀಸ್ ಸಿಬ್ಬಂದಿಗಳಾದ ರವಿಕುಮಾರ್, ಹನುಮಂತಪ್ಪ, ರಾಮಪ್ಪ ಇತರರು ಹಾಜರಿದ್ದರು.

error: Content is protected !!