ದಾವಣಗೆರೆ, ಫೆ. 5 – ಸ್ಮಾರ್ಟ್ ಸಿಟಿ ವತಿಯಿಂದ ಅನುಷ್ಠಾನಗೊಳಿಸಿರುವ ಐಸಿಟಿ ಕಾಮಗಾರಿಗಳ ಪರಿಶೀಲನೆಯನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಈ ಕಾಮಗಾರಿಯಲ್ಲಿ ನಗರದ ಸರ್ವೈವಲೆನ್ಸ್‌ಗಾಗಿ 112 ಸ್ಥಳಗಳಲ್ಲಿ 220 ಸಿಸಿ ಟಿ.ವಿ. ಕ್ಯಾಮೆರಾಗಳನ್ನು 53 ಪಿ ಟಿ ಝೆಡ್ ಕ್ಯಾಮೆರಾ ಅಳವಡಿಸುವ ಜೊತೆಗೆ ವಿಡಿಯೋ ಸಂಸ್ಕರಣಾ ವ್ಯವಸ್ಥೆ ಇದೆ. ಸರ್ಕಲ್‌ಗಳಲ್ಲಿ ಅಡಾಪ್ಟಿವ್ ಟ್ರಾಫಿಕ್ ಸಿಗ್ನಲ್‌ಗಳನ್ನೂ ಅಳವಡಿಸಲಾಗಿದೆ. ಇದರಿಂದ ಸಿಗ್ನಲ್‌ಗಳಲ್ಲಿ ಟ್ರಾಫಿಕ್ ಆಧಾರಿತವಾಗಿ ಸಿಗ್ನಲ್‌ಗಳು ಬದಲಾಗುತ್ತವೆ.
ಪಬ್ಲಿಕ್ ಅಡ್ರೆಸ್ ಸಿಸ್ಟಮ್, ವೇರಿಯೇಬಲ್ ಮೆಸೇಜ್ ಸೈನ್ ಬೋರ್ಡ್ಸ್, ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ, ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್, ಸಿಸ್ಟಮ್ ಸೇರಿದಂತೆ ಅನೇಕ, ಟ್ರಾಫಿಕ್ ಮತ್ತು ನಗರದ ಸೆಕ್ಯುರಿಟಿ ಆಧಾರಿತ ಕಂಟ್ರೋಲ್‌ಗಾಗಿ ಕಮಾಂಡ್ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು, ನಗರದ ಭದ್ರತೆ ದೃಷ್ಟಿಯಿಂದ ಉತ್ತಮ ಯೋಜನೆಯಾಗಿದ್ದು, ಇದರ ಸರಿಯಾದ ನಿರ್ವಹಣೆ ಮತ್ತು ಬಳಕೆಗೆ ಹೆಚ್ಚು ಒತ್ತು ಕೊಡಲು ಅಧಿಕಾರಿಗಳಿಗೆ ಸೂಚಿಸಿದರು.