22ಕ್ಕೆ ಗುರು ಕೊಟ್ಟೂರೇಶ್ವರ ಮಹಾ ರಥೋತ್ಸವ

22ಕ್ಕೆ ಗುರು ಕೊಟ್ಟೂರೇಶ್ವರ ಮಹಾ ರಥೋತ್ಸವ

ಗಚ್ಚಿನಮಠ ದತ್ತಿ ಇಲಾಖೆಗೆ ಒಳಪಡಿಸಿ..!

ಗುರು ಕೊಟ್ಟೂರೇಶ್ವರ ಸ್ವಾಮಿಯು ಜೀವಂತ ಸಮಾದಿಯಾದ ಗಚ್ಚಿನಮಠವು ಖಾಸಗಿ ಅವರ ಸುಪರ್ಧಿಯಲ್ಲಿದ್ದು, ವರ್ಷಕ್ಕೆ ಕೋಟಿಗಟ್ಟಲೇ ಆದಾಯ ಗಳಿಸಲಿದೆ. ಕೂಡಲೇ ಈ ಮಠವನ್ನು  ಧಾರ್ಮಿಕ, ದತ್ತಿ ಇಲಾಖೆ ವಶಪಡಿಸಿಕೊಳ್ಳಬೇಕು  ಮತ್ತು ಈ ಮಠದ 2019-20-21ನೇ ಸಾಲಿನ ಆಡಿಟಿಂಗ್‌ನಲ್ಲಿ ನಡೆದ ಅವ್ಯವಹಾರ ತನಿಖೆ ಮಾಡಿಸುವಂತೆ ಕೆ. ಕೊಟ್ರೇಶ್‌ ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಶಾಸಕ ಕೆ. ನೇಮಿರಾಜನಾಯ್ಕ ಸೂಚನೆ

ಕೊಟ್ಟೂರು, ಫೆ.5- ಇಲ್ಲಿನ ಕೊಟ್ಟೂರೇಶ್ವರ ಸ್ವಾಮಿಯ ಮಹಾ ರಥೋತ್ಸವವು ಇದೇ ದಿನಾಂಕ 22ರಂದು ನಡೆಯಲಿದ್ದು, ಪಾದಯಾತ್ರೆ ಮೂಲಕ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕೆಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಇಲ್ಲಿನ ಹಿರೇಮಠದ ಮುಂಭಾಗ ಆಯೋಜಿಸಿದ್ದ `ರಥೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣವನ್ನು ಸಂಪರ್ಕಿಸುವ 6 ಪ್ರಮುಖ ರಸ್ತೆಗಳನ್ನು ದುರಸ್ತಿಗೊಳಿಸುವ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದ್ದೇವೆ. ಜಾತ್ರೆ ಆರಂಭಕ್ಕೂ ಮುನ್ನವೇ ದುರಸ್ತಿ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದರು.

ಜಾತ್ರೆಗೆ ಆಗಮಿಸುವ ಜನರಿಗೆ ನೀರಿನ ಬವಣೆ ಆಗದಂತೆ ನೋಡಿಕೊಳ್ಳಬೇಕು. ನೀರಿನ ಸಮಸ್ಯೆ ಉಲ್ಬಣ ವಾದಲ್ಲಿ ಪ.ಪಂ ಆಡಳಿತವು ಹೆಚ್ಚುವರಿ ಟ್ಯಾಂಕರ್‌ ಗಳ ಮೂಲಕ ನಾಗರಿಕರಿಗೆ ನೀರು ಪೂರೈಸಬೇಕು ಎಂದರು.

ಪಟ್ಟಣದ ಎಲ್ಲಾ ವಾರ್ಡ್‌ಗಳನ್ನು ಸ್ವಚ್ಛಗೊಳಿಸ ಬೇಕು. ಎಲ್ಲಿಯೂ ಕಸದ ರಾಶಿ ಕಾಣದಂತೆ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡ ಬೇಕು ಎಂದು ಮುಖ್ಯಾಧಿಕಾರಿಗಳಿಗೆ ತಿಳಿಸಿದರು.

ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಜಾತ್ರೆಯ ಸೊಬಗನ್ನು ಇಮ್ಮಡಿಗೊಳಿಸಲು ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್‌ ದೀಪಗಳಿಂದ ಅಲಂಕರಿಸಲು ಅಧಿಕಾರಿ ಗಳು ಮುಂದಾಗಬೇಕು ಎಂದು ಹೇಳಿದರು.

ನಗರದ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪಟ್ಟಣದೊಳಗೆ ಬ್ಯಾನರ್‌ಗಳನ್ನು ಹಾಕಬಾರದು ಮತ್ತು ಸುರಕ್ಷತಾ ನಿಟ್ಟಿನಲ್ಲಿ ಹೆಚ್ಚಿನ ಭದ್ರತೆ ನೀಡಬೇಕು ಎಂದು ಹೇಳಿದರು.

ಮುಖಂಡರಾದ ಎಂ.ಎಂ.ಜೆ. ಹರ್ಷವರ್ಧನ್, ಬಿ. ಮರಿಸ್ವಾಮಿ, ಟಿ. ಹನುಮಂತಪ್ಪ ಮಂಜುನಾಥ ಗೌಡ, ರುದ್ರಪ್ಪ, ಕೂಡ್ಲಿಗಿ ಕೊಟ್ರೇಶ, ಅಡಕಿ ಮಂಜುನಾಥ ಸಲಹೆಗಳನ್ನು ಹಂಚಿಕೊಂಡರು.

ಈ ವೇಳೆ ಅಧಿಕಾರಿಗಳಾದ ಶಿವಪ್ರಕಾಶ್ ಕೊಟ್ಟೂರು, ಪಿ.ಹೆಚ್. ದೊಡ್ಡರಾಮಣ್ಣ, ಐ. ದಾರುಕೇಶ್, ಮಹಮದ್ ಅಲಿ ಅಕ್ರಮ್ ಷಾ,  ಡಾ. ಆನಂದ್ ಕುಮಾರ್, ರೇಖಾ ಬದ್ದಿ ರಮೇಶ್, ಜಿ.ಕೆ. ಅಮರೇಶ್, ಜಿ. ಸಿದ್ದಯ್ಯ, ಪ.ಪಂ ಸದಸ್ಯರಾದ ಮರಬದ ಕೊಟ್ರೇಶ್, ತೋಟದ ರಾಮಪ್ಪ, ವೀಣಾ ವಿವೇಕಾನಂದಗೌಡ, ಗಂಗಾಧರಪ್ಪ, ಹನುಮಂತಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

error: Content is protected !!