ವಿಶ್ವಚೇತನ ವಿದ್ಯಾನಿಕೇತನ ಕಾಲೇಜಿನಲ್ಲಿ ಇಸ್ರೋ ವಿಜ್ಞಾನಿ ಡಾ. ಮಲ್ಲಿಕಾರ್ಜುನ್ ಕಂಡೆ

ವಿಶ್ವಚೇತನ ವಿದ್ಯಾನಿಕೇತನ ಕಾಲೇಜಿನಲ್ಲಿ ಇಸ್ರೋ ವಿಜ್ಞಾನಿ ಡಾ. ಮಲ್ಲಿಕಾರ್ಜುನ್ ಕಂಡೆ

ದಾವಣಗೆರೆ,  ಫೆ. 4- ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ-ಇಸ್ರೋದ ಹಿರಿಯ ವಿಜ್ಞಾನಿ ಮತ್ತು ಸಂಶೋಧಕರಾದ ಡಾ. ಮಲ್ಲಿಕಾರ್ಜುನ್ ಕಂಡೆ ಅವರು ವಿಶ್ವಚೇತನ ವಿದ್ಯಾನಿಕೇತನ ಶಾಲೆ ಮತ್ತು ಕಾಲೇಜಿಗೆ ಭೇಟಿ ನೀಡಿ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ರಾಕೆಟ್-ಉಪಗ್ರಹ ವಿಜ್ಞಾನ ಕುರಿತು ಆಕರ್ಷಕವಾದ ಸಂವಾದ ನಡೆಸಿದರು.

ಸಂಸ್ಥೆಯ ಅಧ್ಯಕ್ಷ ವಿ. ರಾಘವೇಂದ್ರ ಪ್ರಸಾದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೇತನ ಸಮೂಹ ಸಂಸ್ಥೆಯ ಪ್ರಾಂಶುಪಾಲರು ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಶ್ವಚೇತನ ಕಾಲೇಜಿನ ಪ್ರಾಂಶುಪಾಲ ಜಿ. ವಿನೋದ್ ಸ್ವಾಗತಿಸಿದರು. ವಿದ್ಯಾಚೇತನ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್  ವಂದಿಸಿದರು. ವಿಶ್ವಚೇತನ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಜೋಗಿ ಕಾರ್ಯಕ್ರಮವನ್ನು ನೆರವೇರಿಸಿದರು. 

ವಿಶ್ವಚೇತನ ಸಮೂಹ ಸಂಸ್ಥೆಯ ಪರವಾಗಿ ಡಾ.ಮಲ್ಲಿಕಾರ್ಜುನ್ ಕಂಡೆ ಅವರನ್ನು ಅಭಿನಂದಿಸಿ, ಯುವ ಮನಸ್ಸುಗಳನ್ನು ಉತ್ಕೃಷ್ಟಗೊಳಿಸುವ ಅನುಭವ ಗಳನ್ನು ಬೆಳಗಿದ ಅವರಿಗೆ ಧನ್ಯವಾದ ಸಲ್ಲಿಸಲಾಯಿತು.

error: Content is protected !!