ಮಲೇಬೆನ್ನೂರಿನಲ್ಲಿ ಇಂದು ಗಂಧ, ನಾಳೆ ಉರುಸ್

ಮಲೇಬೆನ್ನೂರಿನಲ್ಲಿ ಇಂದು ಗಂಧ, ನಾಳೆ ಉರುಸ್

ಹಿಂದೂ-ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾದ ಸೂಫಿ ಸಂತ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಗಂಧ (ಸಂದಲ್) ಮತ್ತು ಉರುಸ್ ಇಂದು ಮತ್ತು ನಾಳೆ ಅಪಾರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಹಾಗೂ ಶ್ರದ್ಧಾ-ಭಕ್ತಿಯಿಂದ ಜರುಗಲಿದೆ.

ಈ ಕಾರ್ಯಕ್ರಮಗಳಿ ಗಾಗಿ ದರ್ಗಾ ಹಾಗೂ ದರ್ಗಾ ರಸ್ತೆ ವಿದ್ಯುತ್ ಅಲಂಕಾರ ದಿಂದ ಝಗಮಗಿಸುತ್ತಿದ್ದು, ಭಕ್ತರನ್ನು ಆಕರ್ಷಿಸುತ್ತಿದ್ದು, ಸ್ವಾಗತ ಕೋರುವ ಫ್ಲೆಕ್ಸ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.

ಇಂದು ಸಂಜೆ 4 ಗಂಟೆಗೆ ಮುಸ್ಲಿಂ ಧರ್ಮ ಗುರುಗಳು ಹಿಂದೂಗಳ ಮನೆಯಲ್ಲಿ ಶ್ರೀಗಂಧವನ್ನು
ಪೂಜಿಸಿ ತಂದು ದರ್ಗಾದಿಂದ ಆರಂಭವಾಗುವ ಗಂಧದ ಮೆರವಣಿಗೆ ಪಟ್ಟಣದ ರಾಜ ಬೀದಿಯಲ್ಲಿ ಸಂಚರಿಸಲಿದೆ. ಈ ವೇಳೆ ಹಿಂದೂ-ಮುಸ್ಲಿಮರು ಗಂಧಕ್ಕೆ ಸಕ್ಕರೆ ನಿವೇದಿಸಿ  ಭಕ್ತಿ ಸಮರ್ಪಣೆ ಮಾಡುತ್ತಾರೆ.

ಗಂಧ ಮತ್ತು ಉರುಸ್ ಅಂಗವಾಗಿ ದರ್ಗಾ ಆವರಣದಲ್ಲಿ ಇದೇ ಮೊದಲ ಬಾರಿಗೆ ಮಧ್ಯಾಹ್ನ 12 ರಿಂದ 4 ರವರೆೆಗೆ ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸುನ್ನಿ ಜಾಮೀಯಾ ಮಸೀದಿಯ ಅಧ್ಯಕ್ಷ ಎಂ.ಬಿ. ಮಹಮ್ಮದ್ ಹಶಿಮ್, ಉಪಾಧ್ಯಕ್ಷ ಸೈಯದ್ ಸಾಬೀರ್, ಧರ್ಮದರ್ಶಿ ದಾದಾವಲಿ, ಖಜಾಂಚಿ ಯೂಸೂಫ್ ಖಾನ್ ತಿಳಿಸಿದ್ದಾರೆ.

ನಾಳೆ ಗುರುವಾರ ಇಡೀ ದಿನ ಭಕ್ತರು ದರ್ಗಾಕ್ಕೆ ಆಗಮಿಸಿ ಭಕ್ತಿ ಸಲ್ಲಿಸಲಿದ್ದು, ರಾತ್ರಿ 9 ಕ್ಕೆ ದರ್ಗಾ ಆವರಣದಲ್ಲಿ ಪ್ರಸಿದ್ಧ ಖವ್ವಾಲರಿಂದ ಖವ್ವಾಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಬಿ.ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಎಸ್. ರಾಮಪ್ಪ, ಹೆಚ್.ಎಸ್. ಶಿವಶಂಕರ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಬಿ.ಎಂ. ವಾಗೀಶ್ ಸ್ವಾಮಿ, ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ. ಚಿದಾನಂದಪ್ಪ, ಹನಗವಾಡಿ ವೀರೇಶ್, ಚಂದ್ರಶೇಖರ್ ಪೂಜಾರ್, ಜಿಲ್ಲಾ ವಕ್ಫ್‌ ಬೋರ್ಡ್ ಅಧ್ಯಕ್ಷ ಮಹ್ಮದ್ ಸಿರಾಜ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.

error: Content is protected !!