ನಿರೀಕ್ಷೆ ಮೀರಿದ ಅಭೂತ ಪೂರ್ವ ಬಜೆಟ್‌

ನಿರೀಕ್ಷೆ ಮೀರಿದ ಅಭೂತ ಪೂರ್ವ ಬಜೆಟ್‌

ದಾವಣಗೆರೆ, ಫೆ.2- ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ರೈತರು, ಮಧ್ಯಮ ವರ್ಗ, ಸಣ್ಣ ಉದ್ಯಮ, ಮೆಡಿಕಲ್ ಹೀಗೆ ಪ್ರತಿ ಕ್ಷೇತ್ರಕ್ಕೂ ಅನನ್ಯ ಕೊಡುಗೆ ನೀಡುವ ಮೂಲಕ ಅಭೂತಪೂರ್ವ ಬಜೆಟ್‌ ಮಂಡಿಸಿದ್ದಾರೆ ಎಂದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್‌ ಶ್ಲ್ಯಾಘಿಸಿದ್ದಾರೆ. ರೈಲ್ವೆ ಕಾರಿಡಾ‌ರ್ ನಿರ್ಮಾಣ, ಗೂಡ್ಸ್ ರೈಲ್ವೆಗಳಿಗೆ ಪ್ರತ್ಯೇಕ ಕಾರಿಡಾರ್, ರೈಲ್ವೆ ಬೋಗಿಗಳ ಉನ್ನತೀಕರಣ, ಹೊಸ ಮಾರ್ಗಕ್ಕೆ ಅನುದಾನ, ಮೊದಲು ಘೋಷಣೆ ಮಾಡಿದ ಹಳೆ ಮಾರ್ಗಕ್ಕೆ ಹೆಚ್ಚಿನ ಅನುದಾನ ನೀಡಿದ್ದು, ರೈಲು ಮಾರ್ಗ ವಿದ್ಯುದೀಕರಣಕ್ಕೆ ಒತ್ತು ನೀಡಿರುವುದು ಒಳ್ಳೆಯ ಬೆಳವಣಿಗೆ. ಆದ್ದರಿಂದ ಇದೊಂದು ಉತ್ತಮ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.

error: Content is protected !!