ನಿಟುವಳ್ಳಿಯಲ್ಲಿ ಮಾರ್ಕಂಡೇಶ್ವರ ಧ್ಯಾನ ಮಂದಿರ ನಿರ್ಮಾಣದ ಭೂಮಿ ಪೂಜೆ

ನಿಟುವಳ್ಳಿಯಲ್ಲಿ ಮಾರ್ಕಂಡೇಶ್ವರ ಧ್ಯಾನ ಮಂದಿರ ನಿರ್ಮಾಣದ ಭೂಮಿ ಪೂಜೆ

ದಾವಣಗೆರೆ, ಫೆ. 2- ನಿಟುವಳ್ಳಿಯ ಶ್ರೀ ಗುರು ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸಮಿತಿ ವತಿಯಿಂದ  ಶ್ರೀ ಮಾರ್ಕಂಡೇಶ್ವರ ಜಯಂತ್ಯೋತ್ಸವದ ಅಂಗವಾಗಿ  ಮಾರ್ಕಂಡೇಶ್ವರ ಧ್ಯಾನ ಮಂದಿರ ನಿರ್ಮಾಣದ ಭೂಮಿ ಪೂಜೆಯ ಕಾರ್ಯಕ್ರಮ ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ಶ್ರೀ ಗುರು ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸಮಿತಿಯ ಅಧ್ಯಕ್ಷ ಕೋತಮ್ ಚಿದಾನಂದ್, ಉಪಾಧ್ಯಕ್ಷ ಶೇಪುರ್ ಸತ್ಯನಾರಾಯಣ, ಪೊತುಲ್ ಶ್ರೀನಿವಾಸ್, ಪೇರಿಮಿನವರ್ ಮಾರ್ಕಂಡೇಯ, ಖಜಾಂಚಿ ಎಂ. ಬಸವರಾಜ್ ಗುಗ್ರಿ, ಕಾರ್ಯದರ್ಶಿ ಚುಂಚುಲರ್ ಕುಮಾರ್, ಸಹಕಾರ್ಯದರ್ಶಿ ವಿಶ್ವನಾಥ್ ಗಣೇಶ್, ವಸೇನವರು ಸತೀಶ್ ಹೆಚ್.ಆರ್. ಸಂಘಟನಾ ಕಾರ್ಯದರ್ಶಿ ಮೇಡಪಳ್ಳಿ ವೆಂಕಟೇಶ್ ಹಾಗೂ ಪದ್ಮಶಾಲಿ ಸಮಿತಿಯ ಸದಸ್ಯರುಗಳು, ಪದ್ಮಶಾಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

error: Content is protected !!