ಹೊನ್ನಾಳಿ, ಫೆ. 2 – ತಾಲ್ಲೂಕಿನ ಘಂಟ್ಯಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ. ಷಣ್ಮುಖ ನಾಯ್ಕ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಹಕಾರ ಅಭಿವೃದ್ಧಿ ಅಧಿಕಾರಿ ಎ.ಜಿ. ನವೀನ್ ಕುಮಾರ್ ಘೋಷಿಸಿದರು.
ಹಿಂದಿನ ಅಧ್ಯಕ್ಷರಾಗಿದ್ದ ಆರ್.ಸಿ. ಉಮೇಶ್ ನಾಯ್ಕ್ ಅವರಿಂದ ತೆರವಾದ ಸ್ಥಾನಕ್ಕೆ ಇತರೆ ಸದಸ್ಯರಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಬಿ. ಷಣ್ಮುಖ ನಾಯ್ಕ್ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಆರ್.ಸಿ. ಉಮೇಶ್ ನಾಯ್ಕ್, ಉಪಾಧ್ಯಕ್ಷೆ ಅಮ್ಮಿಬಾಯಿ, ನಿರ್ದೇಶಕ ಕೆ.ಎಲ್. ನಾಗ್ಯನಾಯ್ಕ, ನಾಮ್ಯಾನಾಯ್ಕ, ವಿ. ಅಶೋಕ್, ಸುರೇಶ್ ನಾಯ್ಕ್, ಅನುಸೂಯ ಬಾಯಿ, ಸಂಘದ ಕಾರ್ಯದರ್ಶಿ ಪ್ರಿಯಾಂಕ ಉಪಸ್ಥಿತರಿದ್ದರು.