ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಹೇಮಾ ಪೂಜಾರಿ ಪುನರಾಯ್ಕೆ

ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಹೇಮಾ ಪೂಜಾರಿ ಪುನರಾಯ್ಕೆ

ದಾವಣಗೆರೆ, ಫೆ. 2- ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದ ಸರ್ವ ಸದಸ್ಯರ ಮಹಾಸಭೆಯಲ್ಲಿ ಹೇಮಾ ಶಾಂತಪ್ಪ ಪೂಜಾರಿ ಸರ್ವಾನುಮತದಿಂದ ಪುನರಾ ಯ್ಕೆಯಾಗಿದ್ದಾರೆ ಎಂದು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‍ಶೆಣೈ ತಿಳಿಸಿದ್ದಾರೆ.

ಕಲಾಕುಂಚ ಕಚೇರಿ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಈ ಆಯ್ಕೆ ನಡೆಯಿತು. 

ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾಗಿ ವಸಂತಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಲಲಿತಾ ಕಲ್ಲೇಶ್, ಖಜಾಂಚಿಯಾಗಿ ಟಿ. ಮಾಲಾ ಶಿವಣ್ಣ, ಉಪಾಧ್ಯಕ್ಷರಾಗಿ ಗಿರಿಜಮ್ಮ ನಾಗರಾಜಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಕುಸುಮಾ ಲೋಕೇಶ್, ಸಂಚಾಲಕರಾಗಿ ಸುಮಾ ಏಕಾಂತಪ್ಪ, ಸಮಿತಿ ಸದಸ್ಯರಾಗಿ ಶೈಲಾ ವಿಜಯ್‍ಕುಮಾರ್, ಪ್ರೇಮಾ ಮಹೇಶ್ವರಯ್ಯ, ಶಿಲ್ಪಾ ಉಮೇಶ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕಲಾಕುಂಚ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಜಿ.ಬಿ.ಲೋಕೇಶ್, ಎಸ್.ಮಹೇಶ್ವರಯ್ಯ, ವಿಜಯ್‍ಕು ಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ಸ್ವಾಗತಿಸಿದರು.

error: Content is protected !!