ಜಯರಾಜ್‌ಗೆ ರಾಷ್ಟ್ರಪತಿಗಳ ಶ್ಲ್ಯಾಘನೀಯ ಸೇವಾ ಪದಕ

ಜಯರಾಜ್‌ಗೆ ರಾಷ್ಟ್ರಪತಿಗಳ ಶ್ಲ್ಯಾಘನೀಯ ಸೇವಾ ಪದಕ

ಬೆಂಗಳೂರು, ಜ. 28- ಬೆಂಗಳೂರು ನಗರ ಗೋವಿಂದಪುರ ಠಾಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿರುವ ಜಯರಾಜ್ ಹೆಚ್. ಅವರಿಗೆ ಭಾರತ ಸರ್ಕಾರವು ಈ ಬಾರಿಯ ಗಣರಾಜ್ಯೋತ್ಸವ – 2025ರ ರಾಷ್ಟ್ರಪತಿಗಳ ಶ್ಲ್ಯಾಘನೀಯ ಸೇವಾ ಪದಕ ನೀಡಿ ಗೌರವಿಸಿದೆ.

ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ದಿ. ಶ್ರೀಮತಿ ಸಕ್ರಿಬಾಯಿ ಮತ್ತು ಹೇಮಾನಾಯ್ಕ ದಂಪತಿ ಪುತ್ರರಾದ ಜಯರಾಜ್, ತ್ಯಾವಣಗಿ ತಾಂಡಾದಲ್ಲಿ ಜನಿಸಿ, ದಾವಣಗೆರೆಯ ಎಂ.ಎಸ್‌.ಬಿ. ಕಾಲೇಜಿನಲ್ಲಿ ಬಿ.ಎ. ಪದವಿ, ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ. ಪದವಿ ಪಡೆದಿದ್ದಾರೆ. 2003ರಲ್ಲಿ ಪೊಲೀಸ್ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದರು.

ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಕಾರವಾರ ಜಿಲ್ಲೆ ಯಲ್ಲಾಪುರ ಮತ್ತು ಅಂಕೋಲಾಗಳಲ್ಲಿ ಪಿಎಸ್ಐ ಆಗಿ ಜನಾನುರಾಗಿ ಸೇವೆ ಸಲ್ಲಿಸಿ, ಪೊಲೀಸ್ ನಿರೀಕ್ಷಕರಾಗಿ ಪದೋನ್ನತಿ ಪಡೆದರು. ನಂತರ ಶಿವಮೊಗ್ಗ ನಗರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ರೌಡಿಸಂ ವಿರುದ್ಧ ಕೈಗೊಂಡ ದಿಟ್ಟ ಕ್ರಮಗಳನ್ನು ಗುರುತಿಸಿ ರಾಜ್ಯ ಸರ್ಕಾರ 2015 ರಲ್ಲಿ  ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿತ್ತು.

ನಂತರ ಹಾಸನ ಜಿಲ್ಲೆ ಹೊಳೆನರಸೀಪುರ, ಬೆಂಗಳೂರು ನಗರದ ಕೆ.ಆರ್.ಪುರಂ, ಬಾಣಸವಾಡಿ, ಚಾಮರಾಜಪೇಟೆ, ಸಿಐಡಿ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

error: Content is protected !!