ಸಂವಿಧಾನದ ಮಹತ್ವ ಸಾರುವ ಬ್ಯಾಡ್ಜ್ ಧರಿಸಿದ ಸಚಿವರು, ಸಂಸದರು

ಸಂವಿಧಾನದ ಮಹತ್ವ ಸಾರುವ  ಬ್ಯಾಡ್ಜ್ ಧರಿಸಿದ ಸಚಿವರು, ಸಂಸದರು

ದಾವಣಗೆರೆ. ಜ. 26 – ಜಿಲ್ಲಾಡಳಿತದಿಂದ ಭಾನುವಾರ ಏರ್ಪಾಡಾಗಿದ್ದ 76ನೇ ಗಣರಾ ಜ್ಯೋತ್ಸವ ಸಮಾರಂಭದಲ್ಲಿ ಭಾಗ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂವಿಧಾನದ ಮಹತ್ವ ಸಾರುವ ಸಂವಿಧಾನದ ಪೀಠಿಕೆಯ ಬ್ಯಾಡ್ಜ್ ಧರಿಸುವ ಮೂಲಕ ಗಮನ ಸೆಳೆದರು.  

ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯದ ಮೂರ್ತ ಸ್ವರೂಪ ಹಾಗೂ ದೇಶದ ಐಕ್ಯತೆಯ ಪ್ರತೀಕವಾದ ನಮ್ಮ ಸಂವಿಧಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಸಚಿವರು ಹಾಗೂ ಸಂಸದರು ಗಮನ ಸೆಳೆದಿದ್ದು ವಿಶೇಷವಾಗಿತ್ತು.

error: Content is protected !!