ರೈತರಿಗೆ ಆನ್‍ಲೈನ್‌ ತಂತ್ರಾಂಶದಲ್ಲಿ ಮಂಜೂರಾತಿ

ರೈತರಿಗೆ ಆನ್‍ಲೈನ್‌ ತಂತ್ರಾಂಶದಲ್ಲಿ ಮಂಜೂರಾತಿ

ಶಾಸಕ ಡಿ.ಜಿ. ಶಾಂತನಗೌಡ 

ಹೊನ್ನಾಳಿ,ಜ.22-  ತಾಲ್ಲೂಕಿನ   ಬೆನಕನ ಹಳ್ಳಿ ರೈತರಿಗೆ ಆನ್‍ಲೈನ್ ತಂತ್ರಾಂಶದಲ್ಲಿ ಮಂಜೂರಾತಿ ಆದೇಶ ನೀಡಲಾಗಿದೆ  ಎಂದು ಬಗರ್ ಹುಕ್ಕುಂ ಸಮಿತಿ ತಾಲ್ಲೂಕು ಅಧ್ಯಕ್ಷರೂ ಆಗಿರುವ ಶಾಸಕ ಡಿ.ಜಿ.ಶಾಂತನಗೌಡರು ತಿಳಿಸಿದರು.

ತಾಲ್ಲೂಕು ಕಛೇರಿಯಲ್ಲಿ ನಡೆದ ಬಗರ್ ಹುಕ್ಕುಂ ಸಮಿತಿ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಗರ್ ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡುವ ತಾಲ್ಲೂಕಿನ ರೈತರ  ಅರ್ಜಿಗಳು ಇತ್ಯರ್ಥವಾಗದೇ ನೆನೆಗುದಿಗೆ ಬಿದ್ದಿರುವ ಕಾರಣ ಮುಂದಿನ ಸಭೆಯಲ್ಲಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ     ಶಾಸಕರು ತಿಳಿಸಿದರು.

ಬಲಮೂರಿ ಸ.ನಂ 58ರಲ್ಲಿ ಸಾಗುವಳಿ ಮಾಡುವ ರೈತರು ಎನ್.ಒ.ಸಿಗಾಗಿ ಹೋರಾಟ ನಡೆಸಿದ್ದು, ಹೊನ್ನಾಳಿ ಆರ್.ಎಫ್.ಒದಿಂದ ವರದಿ ಬಂದು ಮೂರು ತಿಂಗಳಲ್ಲೇ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಡಿ.ಎಫ್. ಹೇಳಿದ್ದಾರೆ ಎಂದು ಬಲಮೂರಿ ಮದಕರಿ  ಸಭೆಗೆ ತಂದ ವಿಚಾರವು ಹೆಚ್ಚು ಚರ್ಚೆಗೆ ಗ್ರಾಸವಾಯಿತು.

ಬಗರ್ ಹುಕ್ಕುಂ ಸಮಿತಿ ಸದಸ್ಯೆ ಪುಷ್ಪಾ ರವೀಶ್ ಮಾತನಾಡಿ, ಮಾಸಡಿ ಕೆರೆಯನ್ನು ಶೀಘ್ರ ವೇ ಹದ್ದುಬಸ್ತು ಮಾಡುವಂತೆ ಒತ್ತಾಯಿಸಿದರು.

ಸದಸ್ಯ ಕೊಡತಾಳ್ ರುದ್ರೇಶ್ ಮಾತನಾಡಿ ಕಂದಾಯ ಜಮೀನನ್ನು, ಅರಣ್ಯ ಇಲಾಖೆ ಸುಪ ರ್ದಿಗೆ ತೆಗೆದುಕೊಳ್ಳುತ್ತಾ ಹೋದರೆ ಮುಂದಿನ ದಿನಗಳಲ್ಲಿ ಅರ್ಹ ರೈತ ಫಲಾನುಭವಿಗಳಿಗೆ ಹೆಚ್ಚು ಅನ್ಯಾಯವಾಗುತ್ತದೆ ಎಂದರು.

ಸಭೆಯಲ್ಲಿ ಸಿಂಗಟಗೆರೆ, ದಿಡಗೂರು, ಕತ್ತಿಗೆ, ಬಲಮೂರಿ, ಕುಂದೂರು ಹಾಗು ಇನ್ನಿತರೆ ಗ್ರಾಮದ ರೈತರ 50 ಮತ್ತು 53 ಅರ್ಜಿಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ತಹಶೀಲ್ದಾರ್ ಪಟ್ಟರಾಜೇ ಗೌಡ, ಬಗರ್ ಹುಕ್ಕುಂ ಸಮಿತಿ ಸದಸ್ಯ ಸಣ್ಣಕ್ಕಿ ಬಸವನಗೌಡ, ನ್ಯಾಮತಿ ತಾಲೂಕು ಸದಸ್ಯ ವಾಜೀದ್, ಸರ್ವೇ ಇಲಾಖೆಯ ಎ.ಡಿ ಹಂಸ,   ಅರಣ್ಯಾಧಿಕಾರಿ ಮೈಲಾರ ಸ್ವಾಮಿ,  ಆರ್.ಎಫ್ ಕಿಶೋರ್‌ ಕುಮಾರ್  ಮತ್ತಿತರರು ಇದ್ದರು.

error: Content is protected !!