ಮಲೇಬೆನ್ನೂರು, ಜ, 22 – ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡುವ ಸಹಾಯಧನ ಕಾರ್ಯಕ್ರಮದಡಿಯಲ್ಲಿ ಹೊಳೆಸಿರಿಗೆರೆ ವಲಯದ ಎಳೆಹೊಳೆ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಲಗಾಲಿಗೆ ತೀವ್ರ ಹಾನಿಯಾಗಿ ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ವಿಜಯ್ ಅವರಿಗೆ 10 ಸಾವಿರ ರೂ.ಗಳ ಸಹಾಯಧನದ ಚೆಕ್ಕನ್ನು ಮಲೇಬೆನ್ನೂರು ಯೋಜನಾಧಿಕಾರಿ ವಸಂತ ದೇವಾಡಿಗ ಅವರು ಮಂಗಳವಾರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಚಿತ್ರದುರ್ಗ ಪ್ರಾದೇಶಿಕ ಕಚೇರಿಯ ಜನಜಾಗೃತಿ ಯೋಜನಾಧಿಕಾರಿ ನಾಗ ರಾಜ್ ಕುಲಾಲ್ ಮತ್ತು ವಲಯ ಮೇಲ್ವಿಚಾರಕ ರಂಗಸ್ವಾಮಿ ಹಾಜರಿದ್ದರು.
January 23, 2025