ದಾವಣಗೆರೆ, ಜ.22- ನಗರದ ಶ್ರೀ ಶ್ರೀಶೈಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕರಾಗಿದ್ದ ಮೇಕಾ ಮುರುಳಿಕೃಷ್ಣ ಅವರು ಸೇರಿ ದಂತೆ ಐವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಸಂಘದ 13 ನಿರ್ದೇಶಕರ ಸ್ಥಾನಗಳಿಗೆ ಐವರು ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಇನ್ನುಳಿದ 8 ಸ್ಥಾನಗಳಿಗೆ ನಾಡಿದ್ದು ದಿನಾಂಕ 24ರ ಶುಕ್ರವಾರ ಚುನಾವಣೆ ನಡೆಯಲಿದೆ.
ಶ್ರೀ ಶ್ರೀಶೈಲ ಕ್ರೆಡಿಟ್ ಸೊಸೈಟಿಯಲ್ಲಿ ಸತತ 25 ವರ್ಷಗಳಿಂದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ದಾವಣಗೆರೆ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮೇಕಾ ಮುರುಳಿಕೃಷ್ಣ ಅವರು ಮತ್ತೊಂದು ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಹಿಂದುಳಿದ ವರ್ಗ ಪ್ರವರ್ಗ `ಬ’ ಮೀಸಲು ಕ್ಷೇತ್ರದಿಂದ ಮೇಕಾ ಮುರುಳಿಕೃಷ್ಣ, ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ವೈ. ಸರೋಜ ವೆಂಕಟೇಶ್ವರ ರೆಡ್ಡಿ ಮತ್ತು ಶ್ರೀಮತಿ ಶ್ರೀದೇವಿ ತಿಮ್ಮಾರೆಡ್ಡಿ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಟಿ.ಹೆಚ್. ರಾಜಶೇಖರ್ ಮತ್ತು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ ಜಿ.ಆರ್. ರಾಜಾನಾಯಕ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.