ಪೋಷಕರು ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯದ ಕಾಳಜಿ ವಹಿಸಿ

ಪೋಷಕರು ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯದ ಕಾಳಜಿ ವಹಿಸಿ

ದಾವಣಗೆರೆ,ಜ.21- ಹಿಂದಿನ ಕಾಲದಲ್ಲಿ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇತ್ತು. ಪ್ರತಿಯೊಬ್ಬರೂ ನೂರು ವರ್ಷಗಳ ತನಕ ಬಾಳುತ್ತಿದ್ದರು. ಇತ್ತೀಚೆಗೆ ಆಹಾರದ ಬಗ್ಗೆ ಕ್ರಮಬದ್ಧತೆ ಇಲ್ಲದಿರುವುದರಿಂದ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗಿದೆ. ಆದ್ದರಿಂದ ಪ್ರತಿಯೊಬ್ಬ ಪೋಷಕರು ಶಿಕ್ಷಣಕ್ಕೆ ಕೊಡುವ ಮಹತ್ವದ ಜೊತೆಗೆ ಪೌಷ್ಠಿಕಾಂಶದ ಆಹಾರವನ್ನು ಮಕ್ಕಳಿಗೆ ನೀಡಬೇಕು. ಹಾಗಾದಾಗ ಮಗು ಆರೋಗ್ಯವಾಗಿರುತ್ತದೆ. ಇದರಿಂದ ವಿದ್ಯಾಭ್ಯಾಸಕ್ಕೂ ಅನುಕೂಲವಾಗುತ್ತದೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು ಹೇಳಿದರು.

ನಗರದ ಎ.ಸಿ.ಎಂ. ಶಾಲೆಯ 19ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸಹಾಯಕ ಪ್ರಾಧ್ಯಾಪಕ ಎನ್. ಮಲ್ಲಯ್ಯ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಪೋಷಕರಿಗೂ ಶಿಕ್ಷಣ ನೀಡುವ ಅವಶ್ಯಕತೆ ಇದೆ. ಮಕ್ಕಳಿಗೆ ಅಜ್ಜ-ಅಜ್ಜಿ, ಅಕ್ಕ-ತಮ್ಮ ಬಂಧುಗಳ ಸಂಬಂಧದ ಮಹತ್ವ ತಿಳಿಸಬೇಕು. ಸಂಸ್ಕಾರದ ಬೋಧನೆ ಮಾಡಬೇಕೆಂದರು.   ತ್ಯಾವಣಗಿ ವೀರಭದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಮಂಜುನಾಥಸ್ವಾಮಿ, ಎಸ್.ಎಂ. ಮುರುಗೇಶ್ ಉಪಸ್ಥಿತರಿದ್ದರು. ಪ್ರೌಢಶಾಲಾ ಮಕ್ಕಳು ಪ್ರಾರ್ಥಿಸಿದರು. ಸಂಸ್ಥೆಯ ಟ್ರಸ್ಟಿ ಶೃತಿ ವಾರ್ಷಿಕ ವಾಚನ ಮಾಡಿದರು.  ಪ್ರೌಢಶಾಲಾ ಮುಖ್ಯಶಿಕ್ಷಕ ಪ್ರಕಾಶ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ನಿರೂಪಿಸಿದರು.  ಪದ್ಮಶ್ರೀ ವಂದಿಸಿದರು.

error: Content is protected !!