ಮಲೇಬೆನ್ನೂರು, ಜ.20- ಹನಗವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎ.ಬಿ.ಮಂಜುನಾಥ್ (ಅಪ್ಪಿ) ಮತ್ತು ಉಪಾಧ್ಯಕ್ಷರಾಗಿ ತಳವಾರ ನಿಂಗರಾಜ್ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀತಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸಂಘದ ನಿರ್ದೇಶಕರೂ ಆದ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಡಿ.ಕುಮಾರ್, ನೂತನ ನಿರ್ದೇಶಕರಾದ ಕೆ.ಕೊಟ್ರೇಶ್, ಕೆ.ರಾಜು, ಪಿ.ದೇವೇಂದ್ರಪ್ಪ, ಎಂ.ಎಂ.ಸುನೀಲ್‌ಕುಮಾರ್, ಶ್ರೀಮತಿ ಉಷಾ ಸಾರಥಿ ಮಂಜುನಾಥ್, ಶ್ರೀಮತಿ ಮಂಜುಳಾ ಕಲ್ಲಪ್ಪ, ಕೆ.ಎಂ.ಪ್ರಭುದೇವ್, ಬಸವರಾಜ್ ಬಾರ್ಕಿ, ಸಿ.ತಿಪ್ಪೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದು, ಅವಿರೋಧ ಆಯ್ಕೆಗೆ ಸಹಕರಿಸಿದರು.
ಸಂಘದ ಸಿಇಓ ಬಿ.ಶಿವಕುಮಾರ್ ಸ್ವಾಗತಿಸಿದರು.