ಹರಿಹರ, ಜ.20- ಸಂಕ್ರಾಂತಿ ಹಬ್ಬಕ್ಕೆ ಕಲುಷಿತಗೊಂಡಿದ್ದ ನಗರದ ಜೀವನಾಡಿ ತುಂಗಭದ್ರಾ ನದಿಯನ್ನು `ನನ್ನ ಊರು, ನನ್ನ ಹೊಣೆ’ ತಂಡದವರು ಶುಚಿಗೊಳಿಸುವ ಮೂಲಕ ಅಲ್ಲಿದ್ದ ಬಟ್ಟೆ, ಕಸ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ವಾಹನದ ಮೂಲಕ ಹೊರಗಡೆ ಸಾಗಿಸಿದರು.
ಈ ವೇಳೆ ತಂಡದ ಮುಖ್ಯಸ್ಥೆ ಅಂಜು ಸುರೇಶ್ ರಾಜೇನವರ್, ನಗರಸಭೆ ಉಪಾಧ್ಯಕ್ಷೆ ಮಾಜಿ ಅಂಬುಜಾ ರಾಜೊಳ್ಳಿ, ಸಾಕ್ಷಿ ಶಿಂಧೆ, ಸಾಕಮ್ಮ, ರವಿಕುಮಾರ್, ರಾಘವೇಂದ್ರ ತೇಲ್ಕರ್, ಗಂಗಾಧರ್ ದುರಗೋಜಿ, ವಶಿಷ್ಠ ರಾಜೇನವರ್ ಹಾಗೂ ಇತರರು ಇದ್ದರು.