ಎಸ್.ಹೆಚ್. ಹೂಗಾರ್
ಮಲೇಬೆನ್ನೂರು, ಜ.19- ವಿದ್ಯಾರ್ಥಿಗಳ ಪ್ರತಿಭೆಗೆ ಸಂಸ್ಕೃತಿ-ಸಂಸ್ಕಾರ ದೊರೆತರೆ, ಅವರ ವ್ಯಕ್ತಿತ್ವ ಬೆಳಗುತ್ತದೆ ಎಂದು ನಿವೃತ್ತ ಶಿಕ್ಷಕ ಎಸ್.ಹೆಚ್. ಹೂಗಾರ್ ಹೇಳಿದರು.
ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಥೆಯ 19ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಮತ್ತು ಪಾಲಕರು ಮಕ್ಕಳ ಕಲಿಕೆಗೆ ಹಾಗೂ ಪ್ರತಿಭೆಗೆ ಪೂರಕ ವಾತಾವರಣ ಕಲ್ಪಿಸ ಬೇಕು. ವಿದ್ಯಾರ್ಥಿಗಳು ಎಷ್ಟೇ ಜ್ಞಾನ ಸಂಪಾದಿ ಸಿದರೂ ಅಹಂಕಾರ ಬೆಳೆಸಿಕೊಳ್ಳದೇ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಇಂದಿನ ಮಕ್ಕಳು ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುವ ಜತೆಗೆ ಕನ್ನಡ ನಾಡು-ನುಡಿಯ ಕೀರ್ತಿಯನ್ನು ಬೆಳೆಸಬೇಕು ಎಂದು ಕಿವಿ ಮಾತು ಹೇಳಿದರು.
ಶಾಲೆಯ ವಿದ್ಯಾರ್ಥಿಗಳಿಂದ ಕರಾಟೆಯ ಸಾಹಸ ಹಾಗೂ ವಿವಿಧ ಬಗೆಯ ನೃತ್ಯಗಳು ಪ್ರದರ್ಶನಗೊಂಡವು. ವಿದ್ಯಾರ್ಥಿಗಳಾದ ಭರತ್ ಮತ್ತು ನಿದಾಸಮ್ರೀನ್ ನಿರೂಪಿಸಿದರು.
ಈ ವೇಳೆ ಬೆಳ್ಳೂಡಿ ಚಂದ್ರಗುಪ್ತ ಮೌರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಿಂಗಪ್ಪ, ಆಡಳಿತಾಧಿಕಾರಿ ಡಾ. ಶೃತಿ ಇನಾಂದಾರ್, ಇಂಜಿನಿಯರ್ ಯು.ಆರ್. ಗಣೇಶ್, ರಾಜೇಶ್ವರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶಿವಾನಂದಪ್ಪ, ಪ್ರಾಚಾರ್ಯೆ ಜಿ.ಓ ಸುಜಾತ ಹಾಗೂ ಮುಖ್ಯಶಿಕ್ಷಕ ಎಸ್. ಶಶಿಧರ ಇದ್ದರು.