ನಂದಿತಾವರೆ ಪಿಎಸಿಎಸ್ ಅಧ್ಯಕ್ಷರಾಗಿ ಎನ್.ಪಿ. ಶಿವನಗೌಡ

ನಂದಿತಾವರೆ ಪಿಎಸಿಎಸ್  ಅಧ್ಯಕ್ಷರಾಗಿ ಎನ್.ಪಿ. ಶಿವನಗೌಡ

ಮಲೇಬೆನ್ನೂರು, ಜ. 17- ನಂದಿತಾವರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಪಿ. ಶಿವನಗೌಡ ಮತ್ತು ಉಪಾಧ್ಯಕ್ಷರಾಗಿ ಎ.ಕೆ. ನಾಗಪ್ಪ ಇವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀತ ಚುನಾವಣಾಧಿಕಾರಿಯಾಗಿದ್ದರು.

ಸಂಘದ ಎಲ್ಲಾ ನಿರ್ದೇಶಕರು, ನಂದಿತಾವರೆ, ಎಕ್ಕೆಗೊಂದಿ, ಬ್ಯಾಲದಹಳ್ಳಿ ಗ್ರಾಮಸ್ಥರು ಈ ವೇಳೆ ಹಾಜರಿದ್ದು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು. ಸಂಘದ ಸಿಇಓ ಕೆ.ಜಿ.ಬಸಮ್ಮ ಸ್ವಾಗತಿಸಿದರು.

error: Content is protected !!