ಹರಿಹರ ತಾಲ್ಲೂಕು ಕಾಂಗ್ರೆಸ್ ಸಭೆಯಲ್ಲಿ ಉಸ್ತುವಾರಿ ವಿಜಯಕುಮಾರ್
ಹರಿಹರ,ಜ.16- ಬೆಳಗಾವಿ ನಗರದಲ್ಲಿ ಇದೇ ದಿನಾಂಕ 21 ರಂದು ನಡೆಯವ ಕಾಂಗ್ರೆಸ್ ಪಕ್ಷದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ತಾಲ್ಲೂಕಿನ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪಕ್ಷದ ತಾಲ್ಲೂಕು ಉಸ್ತುವಾರಿ ವಿಜಯಕುಮಾರ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಕಳೆದ ಡಿಸೆಂಬರ್ 24 ರಂದು ನಿಗದಿಯಾಗದ್ದ ಈ ಸಮಾವೇಶ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನಿಧನದ ಕಾರಣ ಮುಂದೂಡಲಾಗಿತ್ತು. ಮಹಾತ್ಮ ಗಾಂಧೀಜಿ ಅಧಿವೇಶನದ ಅಧ್ಯಕ್ಷರಾಗಿದ್ದ 100ನೇ ವರ್ಷದ ಮತ್ತು ಕಾಂಗ್ರೆಸ್ ಪಕ್ಷದ 75ನೇ ವರ್ಷದ ಸಮಾರಂಭದ ಅಂಗವಾಗಿ ಬೆಳಗಾವಿಯಲ್ಲಿ ಇದೇ ದಿನಾಂಕ 21ರಂದು ಬೆಳಗ್ಗೆ 11ಗಂಟೆಗೆ ಮಹಾತ್ಮಾ ಗಾಂಧಿಯವರ ಪುತ್ಥಳಿ ಅನಾವರಣ ಮಾಡಲಾಗುವುದು.
ಈ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಕೆಪಿಸಿಸಿ ರಾಜ್ಯ ಅಧ್ಯಕ್ಷರು ಸೇರಿದಂತೆ ಇತರೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಆದ್ದರಿಂದ ಹರಿಹರ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಸಮಾರಂಭವನ್ನು ಯಶಸ್ವಿಯಾಗಿಸುವಂತೆ ಅವರು ಹೇಳಿದರು.
ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ, ಬೆಳಗಾವಿ ಸಮಾವೇಶದಲ್ಲಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಹೇಳಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಸಮಾವೇಶದಲ್ಲಿ ಭಾಗವಹಿಸಲು ಹರಿಹರ ತಾಲ್ಲೂಕಿನಿಂದ ಯಾವುದೇ ರೀತಿಯ ವಾಹನ ಮತ್ತು ಇತರೆ ವ್ಯವಸ್ಥೆ ಮಾಡಿರುವುದಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಭಾಗವಹಿಸಿ ಸಮಾರಂಭವನ್ನು ಯಶಸ್ವಿಯಾಗಿಸುವಂತೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ, ನಿಖಿಲ್ ಕೊಂಡಜ್ಜಿ, ಮಲ್ಲಿನಾಥ್, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್ ರಜನಿಕಾಂತ್ ಅಬ್ದುಲ್ ಅಲಿಂ, ಶಾಹಿನಾಬಾನು, ಬಾಬುಲಾಲ್, ನಾಮನಿರ್ದೇಶನ ಸದಸ್ಯರಾದ ಕೆ.ಬಿ. ರಾಜಶೇಖರ್, ದಿವಾಕರ್, ಸಂತೋಷ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಮುಖಂಡರಾದ ಸಿರಿಗೆರೆ ರಾಜಣ್ಣ, ಎಂ.ಬಿ. ಅಣ್ಣಪ್ಪ, ವಿಜಯಕುಮಾರ್, ಅಭಿದಾಲಿ, ಸಿಗ್ಬತ್ ಉಲ್ಲಾ, ದಾದಾಪೀರ್, ಅರುಣ್ ಕುಮಾರ್ ಬೊಂಗಾಳೆ, ಕಮಲಾಪುರ ಮಲ್ಲೇಶ್, ಭಾಗ್ಯಮ್ಮ, ಸಚ್ಚಿನ್ ಕೊಂಡಜ್ಜಿ, ಎಂ.ಎಸ್ ಆನಂದ್, ತಿಪ್ಪೇಸ್ವಾಮಿ, ಹೆಚ್. ಶಿವಪ್ಪ, ಜಪ್ರುಲ್ಲಾ ಕನವಳ್ಳಿ, ಕೆ.ಜಡಿಯಪ್ಪ ಇತರರು ಹಾಜರಿದ್ದರು.