ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ನಾಳೆ ಸ್ಮರಣೋತ್ಸವ

ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ನಾಳೆ ಸ್ಮರಣೋತ್ಸವ

ಚನ್ನಗಿರಿ, ಜ. 15- ತಾಲ್ಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ನಾಡಿದ್ದು ದಿನಾಂಕ 17 ರಿಂದ 19ರವರೆಗೆ ಮೂರು ದಿನ ಲಿಂ. ಶ್ರೀ ಸಂಗಮನಾಥ ಮಹಾಸ್ವಾಮಿಗಳ 63ನೇ ಹಾಗೂ ಲಿಂ. ಶ್ರೀ ಚನ್ನಬಸವ ಮಹಾಸ್ವಾಮಿಗಳ 18ನೇ ವರ್ಷದ ಸ್ಮರಣೋತ್ಸವ ಮತ್ತು ಬಸವ ತತ್ವ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಪತ್ರಿಕಾ ಕಾರ್ಯಾಲಯದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ದಿನಾಂಕ 17ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.

ದಿನಾಂಕ 18ರ ಶನಿವಾರ ಬೆಳಿಗ್ಗೆ 8 ಗಂಟೆಗೆ ಗೌಡ್ರು ಸಿದ್ದರಾಮಪ್ಪ ಧ್ವಜಾ ರೋಹಣ ನೆರವೇರಿಸುವರು. 8.30ಕ್ಕೆ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ ನಡೆ ಯ ಙಲಿದ್ದು,  ಶ್ರೀ ಗುರುಬಸವ ಸ್ವಾಮೀಜಿ, ಎನ್.ಆರ್. ಪುರದ ಬಸವಯೋಗಿ ಶ್ರೀ ಸಾನ್ನಿಧ್ಯ ವಹಿಸುವರು.

ಬೆಳಿಗ್ಗೆ 11 ಗಂಟೆಗೆ ಪಾಂಡೋಮಟ್ಟಿ ಶ್ರೀಗಳ ಅಧ್ಯಕ್ಷತೆ, ಟಿ. ನರಸೀಪುರದ  ಗೌರಿಶಂಕರ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುವ ರೈತ ಸಂಗಮ ಕಾರ್ಯಕ್ರಮವನ್ನು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಉದ್ಘಾಟಿಸುವರು. ನೀರಿನ ಸದ್ಭಳಕೆ, ಮಳೆಯಾಧಾರಿತ ಬೆಳೆಗಳು, ನೈಸರ್ಗಿಕ ಕೃಷಿ, ಆಹಾರ ಮತ್ತು ಆರೋಗ್ಯ ವಿಷಯಗಳ  ಕುರಿತು ತಜ್ಞರಾದ ಚಿತ್ರದುರ್ಗದ ದೇವರಾಜ ರೆಡ್ಡಿ, ಕೂಡ್ಲಿಗಿ ಹೆಚ್.ವಿ. ಸಜ್ಜನ್, ಚಿಕ್ಕಮ ಗಳೂರು ಚಂದ್ರಶೇಖರ ನಾರಾಯಣಪು ಅಮೆರಿಕಾದ ಡಾ. ವಿಶ್ವನಾಥ್ ವಿಷಯ ಮಂಡನೆ ಮಾಡಲಿದ್ದಾರೆ.

ಮಧ್ಯಾಹ್ನ 3.15ಕ್ಕೆ ಧರ್ಮಸಂಗಮ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ಶರಣ ಸಂಗಮ ಸಮಾರಂಭವನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸುವರು. ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಶಾಸಕರಾದ ಬಣಕಾರ, ಹೆಚ್.ಡಿ. ತಮ್ಮಯ್ಯ, ಡಾ. ಎಂ. ಚಂದ್ರಪ್ಪ, ಮಾಜಿ  ಶಾಸಕ ಮಹಿಮಾ ಪಟೇಲ್, ಕಾಂಗ್ರೆಸ್ ವಕ್ತಾರ ಹೊದಿಗೆರೆ ರಮೇಶ್ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

19ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ  ಬಸವ ತತ್ವ ಸಮ್ಮೇಳನದ ಅಧ್ಯಕ್ಷತೆಯನ್ನು ಪಾಂಡೋಮಟ್ಟಿ ಶ್ರೀ, ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ವಹಿಸುವರು. ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀ, ಸಿದ್ದಯ್ಯನಕೋಟೆಯ ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಚಳ್ಳಕೆರೆಯ ತತ್ವ ಚಿಂತಕ ಶಬ್ರೀನಾ  ಮಹ್ಮದ್ ಅಲಿ, ಶಾಸಕರಾದ ಬಸವರಾಜ್ ಶಿವಗಂಗಾ, ಡಿ.ಜಿ. ಶಾಂತನಗೌಡ, ಬೆಂಗಳೂರಿನ ಬಿಡಿಎ ಅಧ್ಯಕ್ಷ ಹ್ಯಾರಿಸ್, ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಯಾದವ್, ಸಿ. ಪುಟ್ಟಣ್ಣ, ರುದ್ರೇಗೌಡ್ರು, ಸಕಲೇಶಪುರ ಶಾಸಕ ಮಂಜುನಾಥ್, ಹನುಮಲಿ ಷಣ್ಮುಖಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಡಿ.ಎಸ್. ಪ್ರವೀಣ್, ಮಾಡಾಳ್ ಮಲ್ಲಿಕಾರ್ಜುನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

error: Content is protected !!