ದಾವಣಗೆರೆ, ಜ. 15- ಸ್ವರ್ಣ ಭಾರತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ಐರಣಿ ಮಠದಲ್ಲಿ ಗಂಗೆ ಪೂಜೆ ನೆರವೇರಿಸುವುದರೊಂದಿಗೆ ಸಂಕ್ರಾಂತಿ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಭಾರತಿ ಕೇಶವಮೂರ್ತಿ ನೇತೃತ್ವದಲ್ಲಿ ನಡೆದ ಸಂಕ್ರಾಂತಿ ಸಂಭ್ರಮದಲ್ಲಿ ಭಾರತಿ, ಪುಷ್ಪ ನಾರಾಯಣ ಸ್ವಾಮಿ, ಲತಾ ಮಂಜುನಾಥ್, ವಿಜಯ ವೀರೇಂದ್ರ, ಮಮತ ತಿಮ್ಮೇಶ್, ವಾಣಿ ವೆಂಕಪ್ಪ ಉಪಸ್ಥಿತರಿದ್ದರು.
ಸ್ವರ್ಣ ಭಾರತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ಸಂಕ್ರಾಂತಿ ಸಂಭ್ರಮ
