ದಾವಣಗೆರೆ, ಜ. 13- ಬಳ್ಳಾರಿಯ ವಿಜಯ ನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ನಿಕಾಯದ, ವಾಣಿಜ್ಯಶಾಸ್ತ್ರ ವಿಭಾಗದ ಸಂಶೋಧಕರಾದ ನಿಂಗಪ್ಪ ಟಿ. ಅವರಿಗೆ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿ.ಹೆಚ್.ಡಿ. ಪದವಿ ಪ್ರದಾನ ಮಾಡಿದೆ. ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಪ್ಪ ಅವರ ಸಂಶೋಧನಾ ಮಾರ್ಗದರ್ಶನದಲ್ಲಿ`ಎ ಸ್ಟಡಿ ಆನ್ ಕನ್ಸೂಮರ್ಸ್ ಬೈಯಿಂಗ ಬಿಹೇವಿಯರ್ ಟುವರ್ಡ್ಸ್ ಎಕೋ-ಫ್ರೆಂಡ್ಲಿ ಪ್ರೊಡಕ್ಟ್ – ಇನ್ ಕರ್ನಾಟಕ’ ಎಂಬ ವಿಷಯದ ಕುರಿತು ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಪ್ರಸ್ತುತ ನಿಂಗಪ್ಪ ಟಿ. ಅವರು ನಗರದ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.
ನಿಂಗಪ್ಪ ಟಿ. ಅವರಿಗೆ ಪಿಹೆಚ್ಡಿ ಪದವಿ
