ಸಿ.ಸಿ. ರಸ್ತೆಗಳ ದುರಸ್ತಿ ಕಾಮಗಾರಿಯ ಪರಿಶೀಲನೆ

ಸಿ.ಸಿ. ರಸ್ತೆಗಳ ದುರಸ್ತಿ ಕಾಮಗಾರಿಯ ಪರಿಶೀಲನೆ

ದಾವಣಗೆರೆ, ಜ. 13 – ಮಹಾನಗರ ಪಾಲಿಕೆಯ ವಿವಿಧ ವಾರ್ಡ್‌ಗಳಲ್ಲಿ ಸಿ.ಸಿ. ರಸ್ತೆಗಳಲ್ಲಿ ದುರಸ್ತಿ ಪಡಿಸದೇ ಬಿಟ್ಟಿರುವ ರೋಡ್ ಕಟ್ಟಿಂಗ್ಸ್‌ಗಳನ್ನು, ಅಪ್ರೋಚ್ ರಸ್ತೆಗಳಿಗೆ ಫೇವರ್ ಅಳವಡಿಸಿ, ದುರಸ್ತಿ ಪಡಿಸುವ ಕಾಮಗಾರಿಗಳನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಭೇಟಿ ನೀಡಿ ಪರಿಶೀಲಿಸಿದರು. ನಗರದ ಚಿಗಟೇರಿ ಆಸ್ಪತ್ರೆ ರಸ್ತೆ, ಕೆಟಿ.ಜೆ. ನಗರ ಮತ್ತು ವಿವಿಧ ಮುಖ್ಯರಸ್ತೆಗಳ ದುರಸ್ತಿ ಕಾಮಗಾರಿಯ ಗುಣಮಟ್ಟವನ್ನು  ಪರಿಶೀಲಿಸಿದರು.  ಈ ಸಂದರ್ಭದಲ್ಲಿ ಹಾಜರಿದ್ದ ಅರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಆಶಾ ಉಮೇಶ್ ನಗರದ ಮುಖ್ಯರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್‌ಗಳಲ್ಲಿ ಬಿದ್ದಿರುವ ಕಸವನ್ನು ವಿಲೇವಾರಿ ಮಾಡಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ್ ಹಾಜರಿದ್ದರು

error: Content is protected !!