ಜಗಳೂರು ತಾಲ್ಲೂಕು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಮಕರ ಸಂಕ್ರಾತಿಯಂದು ಮಹಾ ರಥೋತ್ಸವವು ಇಂದು ಜರುಗಲಿದೆ. ಮಕರ ಸಂಕ್ರಾತಿಯ ರಥೋತ್ಸವದ ಸಾನ್ನಿಧ್ಯವನ್ನು ತಪೋಕ್ಷೇತ್ರ ಗವಿಮಠದ ಪಟ್ಟಾಧ್ಯಕ್ಷರಾದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸುವರು.
ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಶ್ರೀಗಳು, ನಾಡಿನ ಸಾಮಾಜದ ಗಣ್ಯರು, ರಾಜಕೀಯ ಮುತ್ಸದ್ಧಿಗಳು, ಕಲಾವಿದರು, ವಿದ್ಯಾಂಸರು ಮತ್ತು ಮತ್ತಿತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇಂದು ಉದಯ ಬ್ರಾಹ್ಮೀ ಮುಹೂರ್ತದಲ್ಲಿ ಧನುರ್ಮಾಸ ಪೂಜಾ ಮಂಗಳ, ಮಕರ ಸಂಕ್ರಾಂತಿ ವಿಶೇಷ ಪೂಜಾ ಹಾಗೂ ಗುರು ಶಾಂತಲಿಂಗೇಶ್ವರ ರಥೋತ್ಸವ, ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾ ಪೂಜೆ, ಪಂಚಾಚಾರ್ಯ ಧ್ವಜಾ ರೋಹಣ ನೆರವೇರಿಸಲಾಗುವುದು.
ಲಿಂ.ಕತೃ ಗದ್ದುಗೆಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಲ ಮತ್ತು ಪ್ರಸಾದ ವಿನಿಯೋಗ, ಶಾಂತಿ ಹೋಮಗಳನ್ನು ಮಾಡಲಾಗುವುದು. ಬೆಳಗಿನ ಜಾವ 11 ಘಂಟೆಯಿಂದ ಜಾತ್ರಾ ಮಹೋತ್ಸವದ ವಿಧಿ ವಿಧಾನಗಳು ಹಾಗೂ ಬೆಳಗ್ಗೆ 10 ರಿಂದ ಸಾರ್ವಜನಿಕರಿಗೆ ಸ್ಫಟಿಕ ಲಿಂಗ ದರ್ಶನಕ್ಕೆ ಅವಕಾಶ ನೀಡಲಾಗುವುದು. ಮಧ್ಯಾಹ್ನ 2 ಘಂಟೆಗೆ ಮಕರ ಸಂಕ್ರಾತಿ ಧರ್ಮ ಸಂದೇಶ, ಸಂಜೆ 3:28 ಕ್ಕೆ ಶ್ರೀ ಮಠದ ಕರ್ತೃ ಶ್ರೀ ಗವಿಶಾಂತಲಿಂಗೇಶ್ವರರ ಮಹಾರಥೋತ್ಸವ, ಮತ್ತು ಉತ್ತರಾಯಣ ಪುಣ್ಯ ಪರ್ವಕಾಲದಲ್ಲಿ ದರ್ಶನದ ಜೊತೆಗೆ ಆಶೀರ್ವಾದ ನೀಡಲಾಗುವುದು ಎಂದು ತಿಳಿಸಿದರು.
ರಥೋತ್ಸವಕ್ಕೆ ಸುತ್ತ-ಮುತ್ತಲಿನ ಜಿಲ್ಲೆಯಲ್ಲದೆ ನೆರೆ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಗವಿಮಠಕ್ಕೆ ಹೋಗಲು ಜಗಳೂರಿನಿಂದ ಬಸ್ ಆಟೋ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳು ರೊಟ್ಟಿ, ಪುಡಿಚಟ್ನಿಗಳನ್ನು ತರಲು ಸರ್ವರಿಗೂ ಮುಕ್ತ ಅವಕಾಶವಿರುತ್ತದೆ.