ಹೊನ್ನಾಳಿ, ಜ. 13- ಹೊನ್ನಾಳಿ ಶಿವ ಸಹಕಾರ ಸಂಘದ ಅಧ್ಯಕ್ಷರಾಗಿ ಕ್ಯಾಸಿನಕೆರೆ ಎ.ಸಿ. ಶಂಕರಗೌಡ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ನವೀನಕುಮಾರ್ ತಿಳಿಸಿದ್ದಾರೆ. ಶಿವಕುಮಾರ್ ಅವರಿಂದ ತೆರವಾದ ಸ್ಥಾನಕ್ಕೆ ಶಂಕರಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷರಾಗಿ ಕೂಲಂಬಿ ಬಸವರಾಜ್, ನಿರ್ದೇಶಕರಾದ ಹೊನ್ನಾಳಿ ಶೈಲೇಶ್, ತರಗನಹಳ್ಳಿ ಮಂಜುಳಾ, ರಾಮೇಶ್ವರ ಚಂದ್ರಪ್ಪ, ಕಮ್ಮಾರಗಟ್ಟೆ ಶಿವಕುಮಾರ್, ಸೂರಗೊಂಡನಕೊಪ್ಪದ ಕೆಂಚಪ್ಪ, ಕುಂದೂರು ಬಸವನಗೌಡ, ಅರಬಗಟ್ಟೆ ಕರಿಬಸಪ್ಪ, ಆರುಂಡಿ ಸತೀಶ್, ದೊಡ್ಡೆತ್ತಿನಹಳ್ಳಿ ಚನ್ನವೀರಪ್ಪ, ಕಡದಕಟ್ಟೆ ಯಶೋಧಮ್ಮ, ವಿಜಯಪುರ ಕೃಷ್ಣಾನಾಯ್ಕ, ನೇರಲಗುಂಡಿ ಚೇತನ, ಕಾರ್ಯದರ್ಶಿ ರುದ್ರೇಶ್ ಇದ್ದರು.
ಹೊನ್ನಾಳಿ ಶಿವ ಸಹಕಾರ ಸಂಘದ ಅಧ್ಯಕ್ಷರಾಗಿ ಕ್ಯಾಸಿನಕೆರೆ ಶಂಕರಗೌಡ
