ಮಕರ ಸಂಕ್ರಾಂತಿ – ಪರಿಸರ ಸ್ನೇಹಿ ಸಂತೆ

ಮಕರ ಸಂಕ್ರಾಂತಿ – ಪರಿಸರ ಸ್ನೇಹಿ ಸಂತೆ

ದಾವಣಗೆರೆ, ಜ.13- ಡಾ. ಶಾಮನೂರು ಶಿವಶಂಕರಪ್ಪ ನ್ಯಾಷನಲ್‌ ಪಬ್ಲಿಕ್‌ ಶಾಲೆಯಲ್ಲಿ ಸೋಮವಾರದಂದು `ಮಕರ ಸಂಕ್ರಾಂತಿ-ಪರಿಸರ ಸ್ನೇಹಿ ಸಂತೆಯನ್ನು ಸಂಭ್ರಮದಿಂದ ಆಚರಿಸಿದರು. ವಿದ್ಯಾರ್ಥಿಗಳು ಹಾಡು, ನೃತ್ಯವನ್ನು ಪ್ರದರ್ಶನ ಮಾಡಿದರು. ಸಂಕ್ರಾಂತಿ ಸಂತೆಯಲ್ಲಿ ಸಾಂಸ್ಕೃತಿಕ ಗ್ರಾಮದ ವೈಭವ, ಪರಿಸರ ಸಂತೆ, ಆಟಗಳು ಮತ್ತು ಇತರೆ ಸ್ಪರ್ಧೆಗಳು ನಡೆದವು. ಶಾಲೆಯ ಮಕ್ಕಳು ಮತ್ತು ವಿದ್ಯಾರ್ಥಿಗಳು ಎಳ್ಳು-ಬೆಲ್ಲ ಹಂಚಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ವೇಳೆ ಪ್ರಾಚಾರ್ಯೆ ಕಮಲ ಬಿ. ನಾರಾಯಣ, ಉಪ ಪ್ರಾಚಾರ್ಯ ರಮೇಶ್‌ ಬಾಬು, ಆಡಳಿತಾಧಿಕಾರಿ ಎಸ್‌. ಅಜಯ್‌, ಸಂಯೋಜಕರಾದ ರುತಿಕಾ, ಬಾಪೂಜಿ ಸಂಸ್ಥೆಯ ಡೀನ್‌ ಮಂಜುನಾಥ್‌ ರಂಗರಾಜು ಮತ್ತು ಶಾಲೆಯ ಸಿಬ್ಬಂದಿ ಇದ್ದರು.

error: Content is protected !!