ಬೆಂಗಳೂರು, ಜ. 12 – ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಮತ್ತು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಇಲ್ಲಿನ ಅವರ ನಿವಾಸದಲ್ಲಿ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದ ಮ.ನಿ.ಪ್ರ. ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮೀಜಿ ಭೇಟಿ ಮಾಡಿ ಆಶೀರ್ವದಿಸಿದರು.
ಎಸ್ಸೆಸ್ ಅವರು ಶತಾಯುಷಿಗಳಾಗಲಿ ಹಾಗೂ ಇನ್ನಷ್ಟು ಕಾಲ ಸಮಾಜವನ್ನು ಮುನ್ನಡೆಸಲಿ ಎಂದು ಹಾರೈಸಿದರು.